ಮಾಬೂಬೀ ಗ್ರಾಪಂ ಅಧ್ಯಕ್ಷೆ

Updated on: 

ಹಗರಿಬೊಮ್ಮನಹಳ್ಳಿ:  ತಾಲೂಕಿನ ತಂಬ್ರಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಪಿಂಜಾರ ಮಾಬೂಬೀ ರಾಮನಮಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹನ್ನೊಂದು ಸದಸ್ಯ ಬಲದ ಈ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬಡಿಗೇರ ನಿಂಗಮ್ಮ ರಾಜಿನಾಮೆ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಹುದ್ದೆಗೆ ಸೋಮವಾರ ಗ್ರಾಪಂ ಸಭಾಂಗಣದಲ್ಲಿ ಚುನಾವಣೆ ಜರುಗಿತು. ಚುನಾವಣಾಧಿಕಾರಿಯಾಗಿ ಸಿಡಿಪಿಒ ಅಶೋಕ್ ಕಾರ್ಯ ನಿರ್ವಹಿಸಿದರು. ಮಾಬೂಬೀ ಅವರನ್ನು ಜೆಡಿಎಸ್ ಮುಖಂಡ ಅಕ್ಕಿ ತೋಟೇಶ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ, ಗ್ರಾಪಂ ಮಾಜಿ ಅಧ್ಯಕ್ಷ ಬಣಕಾರ ಕೊಟ್ರೇಶ್, ಖಾದರ್ ಸಾಬ್, ಸದಸ್ಯರಾದ ಯು. ದ್ಯಾಮಪ್ಪ, ಮರಿಯಜ್ಜ, ಶಶಿಧರ, ನಿಂಗಮ್ಮ, ಗಂಗಮ್ಮ, ಗೌರಮ್ಮ, ಹನುಮಂತಮ್ಮ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಾಲ್ವಿ ವೀರಣ್ಣ, ಮುಖಂಡರಾದ ಎಚ್.ಬಿ. ಗಂಗಾಧರ ಗೌಡ, ಗಂಗಾವತಿ ರಹಿಮಾನಸಾಬ್, ಸಂಗನಬಸಪ್ಪ, ಪಂಪಾಪತಿ, ಮಂಜುನಾಥ ಪಾಟೀಲ್, ಗಿರೀಶ್ ಅಭಿನಂದಿಸಿದರು.
ಪುಂಡಾಟಿಕೆ ಖಂಡಿಸಿ ಮನವಿ
ಸಂಡೂರು: ಬೆಳಗಾವಿಯ ಯಳ್ಳೂರಿನಲ್ಲಿ ಎಂಇಎಸ್ ಕಾರ್ಯಕರ್ತರು ಮರಾಠಿ ನಾಮಫಲಕ ಮರು ಸ್ಥಾಪಿಸಿ ತಮ್ಮ ಪುಂಡಾಟಿಕೆ ಮೆರೆದಿರುವುದನ್ನು ಖಂಡಿಸಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಆರ್. ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಹೈಕೋರ್ಟ್ ಆದೇಶ ಮತ್ತು ಜಿಲ್ಲಾಡಳಿತ ಲೆಕ್ಕಿಸದೆ ತಮ್ಮ ಹಳೇ ಚಾಳಿ ಮುಂದುವರಿಸಿ, ಪುಂಡಾಟಿಕೆ ನಡೆಸಿ ಆಶಾಂತಿ ನಿರ್ಮಿಸಲು ಹೊರಟಿದ್ದಾರೆ. ಕಾರಣ ಘಟನೆಯಲ್ಲಿ ಭಾಗಿಯಾದ ಎಂಇಎಸ್ ಕಾರ್ಯಕರ್ತರನ್ನು ಬಂಧಿಸಿ, ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಕರವೇ ಕಾರ್ಯಕರ್ತರು ಆಗ್ರಹಿಸಿದರು. ಈ ಸಂದರ್ಭ ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೆ.ಆರ್. ಕುಮಾರಸ್ವಾಮಿ, ಗೌರವಾಧ್ಯಕ್ಷ ಎಚ್. ಮಂಜುನಾಥ್, ಕಾರ್ಯಾಧ್ಯಕ್ಷ ನರಸಿಂಹ, ಮಲ್ಲಯ್ಯ ಸ್ವಾಮಿ, ಮಲ್ಲೇಶ್, ರಾಮು ಇತರರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com