ಸಂಡೂರು: ದಕ್ಷಿಣ ಭಾರತದ ಇಬ್ಬರು ಪ್ರಸಿದ್ದ ಗಾಯಕಿಯರಾದ ಎಸ್. ಜಾನಕಿ ಮತ್ತು ಪಿ. ಸುಶೀಲ ಅವರು ಕನ್ನಡಿಗರಲ್ಲದಿದ್ದರೂ ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಬೆಂಗಳೂರಿನ ಕಲಾವಿದ ರಾಘವೇಂದ್ರ ಕಂಚನ್ ಅಭಿಪ್ರಾಯಪಟ್ಟರು. ಪಟ್ಟಣದ ಆದರ್ಶ ಸಮುದಾಯ ಭವನದಲ್ಲಿ ಎಸ್ಪಿಎಸ್ ಬ್ಯಾಂಕ್ ಹಾಗೂ ವೆಸ್ಕೋ ಕಂಪನಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ವೆಸ್ಕೋ ಕಂಪನಿ ಮಾಲೀಕ ಕೆ.ಎಸ್. ನಾಗರಾಜ, ಎಸ್ಪಿಎಸ್ ಬ್ಯಾಂಕ್ನ ವ್ಯವಸ್ಥಾಪಕಿ ರೇಣುಕಮ್ಮ, ಅಧಿಕಾರಿಗಳಾದ ಪ್ರಕಾಶ್ ಕೆ. ಕೊಟ್ರೇಶ್, ಬಳ್ಳಾರಿ ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಸಾಲಿ ಸಿದ್ದಯ್ಯ, ಅಲ್ಲಂ ಗುರು ಬಸವರಾಜ ಇತರರು ಇದ್ದರು. ಪ್ರಸಿದ್ಧ ಗಾಯಕರಾದ ಅಜೆಯ್ ವಾರಿಯರ್, ಸುನಿತಾ, ಮಹಾಲಕ್ಷ್ಮೀ, ನಕುಲ್, ಸೀಮಾ ರಾಯ್ಕರ್, ಸಂಗೀತ್ ಥಾಮಸ್ ಮತ್ತು ಹರ್ಷ, ಕೋಳಲು ವಾದಕ ಸಂದೀಪ್, ತಬಲ ಸಾಥ್ ಮಧುಸೂದನ್, ಗಿಟಾರ್ ಕಾರ್ತಿಕ್, ಚಂದ್ರಶೇಖರ್, ಕೀ ಬೋರ್ಡ್ನಲ್ಲಿ ಸೆಲಿಸ್ಟಿನ್ ಜೆರಾಲ್ಡ್ ಅಗಮಿಸಿ ಪಿ. ಸುಶೀಲಾ, ಎಸ್. ಜಾನಕಿ ಹಾಡಿದ ಹಳೇ ಚಿತ್ರಗೀತೆಗಳನ್ನು ಗಾಯಕರು ಹಾಡಿ ಜನರ ಮನ ರಂಜಿಸಿದರು.