ಹೂವಿನಹಡಗಲಿ ತಾಲೂಕು ಕ್ರೀಡಾಂಗಣದಲ್ಲಿ ಆರಿಯನ್ಸ ಕ್ರಿಕೆಟರ್ಸ್ ವತಿಯಿಂದ 2014-15ನೇ ಸಾಲಿನ ಆರಿಯನ್ಸ ಟ್ರೋಫಿ- ಜಿಲ್ಲಾಮಟ್ಟದ ಸ್ಟಂಪರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ತಂಡದ ಸದಸ್ಯರು ತಿಳಿಸಿದ್ದಾರೆ. ಜೂ. 20ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಭಾಗವಹಿಸುವ ತಂಡಗಳು ಹೆಸರನ್ನು ನೊಂದಾಯಿಸಲು ಜೂ.18 ಕೊನೆ ದಿನವಾಗಿದೆ. ನೋಂದಣಿ ಶುಲ್ಕವನ್ನು ರು. 1001 ಗಳನ್ನು ನಿಗದಿಗೊಳಿಸಿದ್ದು, ಸಕಾಲದಲ್ಲಿ ನೋಂದಣಿ ಮಾಡಿಸಬೇಕೆಂದು ತಿಳಿಸಿದ್ದಾರೆ.