ಕೂಡ್ಲಿಗಿ: ಪಟ್ಟಣದಲ್ಲಿ ಅಭಿನವ ಚಕ್ರವರ್ತಿ ಬ್ಲೂಬಾಯ್ಸ್ ಕ್ರಿಕೆಟರ್ಸ್ ವತಿಯಿಂದ ಜಿಲ್ಲಾ ಮಟ್ಟದ ಸ್ಟಂಪರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ಗೆ ಕೂಡ್ಲಿಗಿಯ ಯುವ ಮುಖಂಡ ಬಂಗಾರು ಹನುಮಂತು ಬ್ಯಾಟ್ ಬೀಸುವುದರ ಮೂಲಕ ಶನಿವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ, ಕ್ರೀಡೆಯಲ್ಲಋ ಸೋಲು, ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು ಎಂದರು. ಪಂದ್ಯಾವಳಿ ಆಯೋಜಕರಾದ ಪಟ್ಟಣದ ರಾಘವೇಂದ್ರ ಗುರಿಕಾರ, ಮುರಳಿ, ಮಹೇಶ್, ರಾಘವೇಂದ್ರ, ಬಾಬು, ಕೊತ್ಲೇಶ್, ಊರಮ್ಮರ ಕೃಷ್ಣ, ಪಂಪಾಪತಿ, ಚಂಡರಾಘು, ಪ್ರಕಾಶ್, ಕೊಂಡಯ್ಯರ ರಾಘವೇಂದ್ರ, ಜುಬೇರ್ ಮುಂತಾದವರು ಹಾಜರಿದ್ದರು. ಟೂರ್ನಮೆಂಟ್ನಲ್ಲಿ 20ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.