ಕಂಪ್ಲಿ: ಇಲ್ಲಿನ 3ನೇ ವಾರ್ಡ್ನ ಚಪ್ಪರದಳ್ಳಿಯ ಡಾ. ರಾಜ್ಕುಮಾರ್ ಜ್ಞಾನ ಮಂದಿರದ ಪೂರ್ವ ಪ್ರಾಥಮಿಕ ಶಾಲೆಯ 165 ಮಕ್ಕಳಿಗೆ ಸಂಸ್ಥೆಯಿಂದ ಬುಧವಾರ ಉಚಿತ ಸಮವಸ್ತ್ರ, ಟೈ, ಬೆಲ್ಟ್ ಹಾಗೂ ಸಾಕ್ಸ್ ವಿತರಿಸಲಾಯಿತು. ಸಮವಸ್ತ್ರ ವಿತರಿಸಿದ ಪುರಸಭೆ ಸದಸ್ಯ ಸಿ.ಆರ್. ಹನುಮಂತ ಮಾತನಾಡಿ, ಪಾಲಕರು ಮತ್ತು ಪೋಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಡಾ. ರಾಜ್ಕುಮಾರ್ ಜ್ಞಾನ ಮಂದಿರ ಸಂಸ್ಥಾಪಕ ಭಾವೈಕ್ಯ ಸಿ. ವೆಂಕಟೇಶ ಮಾತನಾಡಿ, ಸಂಸ್ಥೆಯಿಂದ ಕೊಡುವ ಉಚಿತ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಮುಖ್ಯಗುರು ಎಲ್. ಸಂತೋಷ, ಶಿಕ್ಷಕಿಯರಾದ ಗಾಯಿತ್ರಿ, ಮೀನಾಕ್ಷಿ, ಮಂದಾರ, ನೀಲಮ್ಮ, ಯುವ ಮುಖಂಡರಾದ ಭಾವಿಕಟ್ಟೆ ವೆಂಕಟೇಶ, ಕೆ. ತಿಮ್ಮಯ್ಯ, ಮನೋಜ್, ವಿರೂಪಣ್ಣ, ಗುರು ಇದ್ದರು.