ಬೀದರ್: ಪ್ರಸಕ್ತ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಕ್ರೀಡಾಕೂಟದ ಅಂಗವಾಗಿ ಬ್ಯಾಡ್ಮಿಂಟನ್ ಮತ್ತು ಹಾಕಿ ಪಂದ್ಯಾವಳಿಗಳನ್ನು ಫೆ. 25ರಿಂದ ಮಾರ್ಚ್ 3ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಈ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ ಬ್ಯಾಡ್ಮಿಂಟನ್ ಮತ್ತು ಹಾಕಿ ತಂಡದ ಆಯ್ಕೆಯನ್ನು ಫೆ. 4 ರಂದು ನಡೆಸಲಾಗುವುದು.
ಹಾಕಿ ಕ್ರೀಡೆಯ ತಂಡವನ್ನು ಬೆಂಗಳೂರಿನ ಅಕ್ಕಿ ತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ಹಾಕಿ ತರಬೇತುದಾರರಾದ ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಈ ಕ್ರೀಡೆಯಲ್ಲಿ ಭಾಗವಹಿಸುವ ಬೀದರ್ ಜಿಲ್ಲಾ ಸ್ವರ್ಧಾಳುಗಳು ತಿಳಿಸಿದ ಸ್ಥಳದಲ್ಲಿ ಫೆ. 4ರಂದು ಬೆಳಿಗ್ಗೆ 8 ಗಂಟೆಯೊಳಗಾಗಿ ವರದಿ ಮಾಡಿಕೊಳ್ಳಲು ತಿಳಿಸಿದ್ದಾರೆ. ಬ್ಯಾಡ್ಮಿಂಟನ್ ತಂಡವು ರಾಜ್ಯ ಯುವ ಕೇಂದ್ರ ಬ್ಯಾಡ್ಮಿಂಟನ್ ಅಂಕಣದಲ್ಲಿ ಬ್ಯಾಡ್ಮಿಂಟನ್ ತರಬೇತುದಾರ ಬಿಎನ್. ಸುಧಾಕರ್ ನೇತೃತ್ವದಲ್ಲಿ ಆಯ್ಕೆ ನಡೆಸಲಾಗುವುದು.
ಆದ್ದರಿಂದ ಈ ಕ್ರೀಡೆಯಲ್ಲಿ ಭಾಗವಹಿಸುವ ಜಿಲ್ಲೆಯ ಸ್ಪರ್ಧಾಳುಗಳು ಮೇಲಿನ ಸ್ಥಳದಲ್ಲಿ ಫೆ. 4 ರಂದು ಬೆಳಿಗ್ಗೆ 8 ಗಂಟೆ ಒಳಗಾಗಿ ವರದಿ ಮಾಡಿಕೊಳ್ಳಬೇಕೆಂದು ಬೀದರ್ನ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.