ಬೀದರ್: ತಾಲೂಕಿನ ಜನವಾಡಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಶಾಸಕ ರಹೀಂ ಖಾನ್ ತಮ್ಮ ವೈಯಕ್ತಿಕ ಅನುದಾನದಿಂದ ಗಣಕಯಂತ್ರ ವಿತರಿಸಿದರು.
ಶುಕ್ರವಾರ ಶಾಲೆಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ ವಹಿಸಿ, ಕಳೆದ ಪರೀಕ್ಷೆಯಲ್ಲಿ ಇಮ್ರಾನ್ ಸತ್ತಾರಮಿಯ್ಯಾ ಹಾಗೂ ಆಕಾಶ ಅಂಬಾದಾಸ ಅವರಿಗೆ ಗಣಕ ಯಂತ್ರ ವಿತರಿಸಿದರು.
ಮುಖ್ಯ ಅತಿಥಿಯಾಗಿ ಶಾಸಕ ರಹೀಮ್ಖಾನ್, ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ ಪೊದ್ದಾರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಕಾಶಿನಾಥರಾವ ಪಾಟೀಲ್, ಮುಖ್ಯಗುರು ಬಿಕೆ ದಿಗಂಬರ್ ಇದ್ದರು .ತಾನಾಜಿ ನರೋಟೆ ಸ್ವಾಗತಿಸಿದರೆ, ಮುಖ್ಯಗುರು ಪ್ರಸ್ತಾವಿಕ ಮಾತನಾಡಿದರು. ತಾರಾ ಮೂಲಗೆ ನಿರೂಪಿಸಿದೆ ಶಿವಕುಮಾರ ಬಾವಗೆ ವಂದಿಸಿದರು.