ಬಸವ ಜ್ಯೋತಿ ಯಾತ್ರೆಗೆ ಸಂಭ್ರಮದ ಸ್ವಾಗತ

Updated on: 

ಬೀದರ್: ನಗರದಲ್ಲಿ ಫೆ. 23ರಿಂದ ಜರುಗಲಿರುವ ವಚನ ವಿಜಯೋತ್ಸವದ ನಿಮಿತ್ತ ಭಾಲ್ಕಿ ತಾಲೂಕಿನ ಕಣಜಿ ಗ್ರಾಮಕ್ಕೆ ಆಗಮಿಸಿದ ಬಸವ ಜ್ಯೋತಿ ರಥಯಾತ್ರೆಗೆ ಇಲ್ಲಿನ ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು.
  ಬಸವ ಜ್ಯೋತಿ ಸಮಾರಂಭದ ನೇತೃತ್ವ ವಹಿಸಿದ್ದ ಅಕ್ಕ ಅನ್ನಪೂರ್ಣ ಆಶೀರ್ವಚನ ನೀಡಿ, ವಿಶ್ವದಲ್ಲಿ ಮಾನವೀತೆಯ ಸ್ಥಾಪನೆಗಾಗಿ, ಸರ್ವಸಮಾನತೆಯನ್ನು ನೆಲೆಗೊಳಿಸಲು 12ನೇ ಶತಮಾನದಲ್ಲಿ ಅನೇಕ ಶರಣರು ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ. ಅವರ ತ್ಯಾಗದ ಫಲವಾಗಿ ವಚನ ಸಾಹಿತ್ಯ ನಮಗೆ ಲಭಿಸಿದೆ ಎಂದರು.
  ಅಂತಹ ಶರಣರ ತ್ಯಾಗ ಬಲಿದಾನದ ಸ್ಮರಣೆಗಾಗಿ ವಚನ ವಿಜಯೋತ್ಸವವು ಬೀದರ್ ನಗರದ ಬಸವ ಗಿರಿಯಲ್ಲಿ ಆಚರಿಸಲಾಗುತ್ತಿದೆ ಇದು ನೊಂದವರ, ಬೆಂದವರ, ದೀನ ದಲಿತರ, ಶೋಷಿತರ ವಿಜಯೋತ್ಸವವಾಗಿದೆ. ಜಾತಿ ಭೇದ ಮರೆತು ಎಲ್ಲರೂ ವಚನ ವಿಜಯೋತ್ಸವದಲ್ಲಿ ಭಾಗವಹಿಸಿ ಬಸವಾದಿ ಶರಣರ ತತ್ವ ಆಚರಣೆಗೆ ತಂದರೆ ಸರ್ವ ಸುಂದರ ಸಮಾಜ ನಿರ್ಮಾಣವಾಗುವಲ್ಲಿ ಸಂದೇಹವಿಲ್ಲ ಎಂದರು.
  ಮುಖ್ಯ ಅತಿಥಿ ಯುವ ಉದ್ಯಮಿ ಬಸವರಾಜ ಧನ್ನೂರ ವಚನ ವಿಜಯೋತ್ಸವದ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆ ಮಾಡಿ ಮಾತನಾಡಿ, ವಚನಗಳೆಂದರೆ ನಮಗೆ ದಾರಿ ತೋರಿಸುವ ದೀವಿಟಿಗಳಾಗಿವೆ ಅವುಗಳನ್ನು ಸಂರಕ್ಷಿಸಿ ಜಗತ್ತಿಗೆ ತಲುಪಿಸುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಈ ದಿಸೆಯಲ್ಲಿ ಅಕ್ಕನವರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
  ರಮೇಶ ಮಠಪತಿ ವಚನ ವಿಜಯೋತ್ಸವದ 3ದಿನಗಳ ಕಾರ್ಯಾಕ್ರಮ ವಿವರ ನೀಡಿದರು. ಮಲಶೆಟ್ಟೆಪ್ಪಾ ಗಾದಗಿ ಉದ್ಘಾಟಿಸಿದರು. ಉಷಾ ಮಿರ್ಚೆ ಅಧ್ಯಕ್ಷತೆ, ವಿಜಯಕುಮಾರ ಸುಗಾ ಸ್ವಾಗತಿಸಿ ನಿರೂಪಿಸಿ, ಬಸವ ತತ್ವ ಪ್ರಸಾರಕ್ಕಾಗಿ ದುಡಿಯುತ್ತಿರುವ ಸುತ್ತಲಿನ 11 ಗ್ರಾಮದವರಿಗೆ ಗೌರವಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com