ಬಸವಕಲ್ಯಾಣ: ಭಾರತ ತನ್ನದೇ ಆದ ಅಧ್ಯಾತ್ಮಿಕ ವಿಚಾರ ಧಾರೆಯನ್ನು ಕೊಟ್ಟು ಇಡೀ ಪ್ರಪಂಚದ ಗುರು ಎನಿಸಿಕೊಂಡಿದೆ. 12ನೇ ಶತಮಾನದ ಶರಣರ ವಚನ ಸಾಹಿತ್ಯವೇ ಇದಕ್ಕೆ ಮೂಲ ಸಾಕ್ಷಿ ಎಂದು ಬಸವಕುಮಾರ ಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಹೊರವಲಯದಲ್ಲಿನ ಬಸವಧರ್ಮ ಪೀಠ ಬಸವ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ ಲಿಂಗಾಂಗ ಯೋಗ ಪ್ರವಚನದಲ್ಲಿ ಮಾತನಾಡಿ, ವಚನ ಸಾಹಿತ್ಯ ಪ್ರತಿಯೊಬ್ಬರ ಮಾನಸಿಕ ತೊಳಲಾಟ ದೂರ ಮಾಡುತ್ತದೆ ಎಂದು ತಿಳಿಸಿದರು.
ಜಗದೇವಿ ಗೋರ್ಟಾ, ಜಯಶ್ರೀ ಪಾಟೀಲ, ಸರಸ್ವತಿ ವಲ್ಡೂರೆ, ಮಲ್ಲಿಕಾರ್ಜುನ ಪಡಶೆಟ್ಟಿ, ಶರಣಪ್ಪ ಮುಗಳಿ ಉಪಸ್ಥಿತರಿದ್ದರು. ಕ್ರಾಂತಿ ಗಂಗೋತ್ರಿ ಮಹಿಳಾ ಸಂಘಟನೆಯಿಂದ ವಚನ ಗಾಯನ ನೆರವೇರಿಸಲಾಯಿತು. ವಚನಶ್ರೀ ನಿರೂಪಿಸಿ ಗಿರಿಜಾ ಸಿದ್ರಾಮಪ್ಪ ಸ್ವಾಗತಿಸಿ ಸುಮಿತ್ರಾ ವಂದಿಸಿದರು.