ಇಂದು ವಚನ ಸಾಹಿತ್ಯ ಸಮ್ಮೇಳನ

Updated on: 

ಬಸವಕಲ್ಯಾಣ: ತಾಲೂಕಿನ ಸಸ್ತಾಪುರದ ಜೈಭವಾನಿ ಮಂದಿರ ಮತ್ತು ಯಲ್ಲಾಲಿಂಗೇಶ್ವರ ಆನಂದಾಶ್ರಮ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪ್ರಥಮ ಆಧುನಿಕ ವಚನ ಸಾಹಿತ್ಯ ಸಮ್ಮೇಳನ ಹಾಗೂ ಸದ್ಗುರು ಯಲ್ಲಾಲಿಂಗೇಶ್ವರ ಪ್ರಭುಗಳ 27ನೇ ಪುಣ್ಯ ಸ್ಮರಣೋತ್ಸವ ಮತ್ತು ಬಾಲತಪಸ್ವಿನಿ ಶಿವಶರಣೆ ಮಹಾದೇವಿ ತಾಯಿಯವರ 48ನೇ ಹುಟ್ಟುಹಬ್ಬ ಫೆ.7ರಂದು ಜರುಗಲಿದೆ.
  ಅಂದು ಬೆಳಗ್ಗೆ 7ರಿಂದ 9ರವರೆಗೆ ಸದ್ಗುರು ಯಲ್ಲಾಲಿಂಗ ಪ್ರಭುಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, ಷಟಸ್ಥಲ ಧ್ವಜಾರೋಹಣ ನಂತರ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆನಂದಾಶ್ರಮದಿಂದ ಬಸ್ ನಿಲ್ದಾಣ ಮುಖಾಂತರ ಪ್ರಮುಖ ಬೀದಿಗಳಲ್ಲಿ ಜರುಗುವುದು. ಎಪಿಎಂಸಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ ಮೆರವಣಿಗೆ ಉದ್ಘಾಟಿಸುವರು.
ಉದ್ಘಾಟನೆಗೆ ಹಂಪನಾ: ಪ್ರಥಮ ಆಧುನಿಕ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಶಿವಶರಣೆ ಮಹಾದೇವಿ ತಾಯಿ ಸಾನ್ನಿಧ್ಯದಲ್ಲಿ ಸಿದ್ದಲಿಂಗೇಶ್ವರ ಮಹಾರಾಜರು, ಭೀಮಶ್ಯಾ ಸಾಧು ಮುತ್ಯಾ, ಪಂಚಾಕ್ಷರಿ ಸ್ವಾಮಿ ನೇತೃತ್ವದಲ್ಲಿ ಸಾಹಿತಿ ಡಾ. ಕಮಲಾ ಹಂಪನಾ ಕಾರ್ಯಕ್ರಮ ಉದ್ಘಾಟಿಸುವರು.
 ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಬಿ.ಎಸ್. ಖೂಬಾ ಅವರ ಉಪಸ್ಥಿತಿಯಲ್ಲಿ ಕೆಪಿಸಿಸಿ ಸದಸ್ಯ ಬಿ. ನಾರಾಯಣ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಎಂ.ಜಿ. ಮೂಳೆ, ಶಾಂತಪ್ಪ ಜಿ. ಪಾಟೀಲ್, ಆನಂದ ದೇವಪ್ಪ, ಶಿವಶರಣ ಬಿರಾದಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಶೇಷ ಉಪನ್ಯಾಸ: ಸಂಜೆ 5.30ರಿಂದ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನಡೆಯಲಿದ್ದು, ಹಿರಿಯ ಸಾಹಿತಿ ಡಾ. ಜಿ.ಬಿ. ವಿಸಾಜಿ ಅಧ್ಯಕ್ಷತೆಯಲ್ಲಿ ಆಧುನಿಕ ವಚನ ಚಿಂತಕ ಹಂಸಕವಿ ಉಪನ್ಯಾಸ ಮಂಡಿಸವರು. ಡಾ. ಬಸವರಾಜ ಬಲ್ಲೂರ್, ನಾಗೇಂದ್ರ ಬಿರಾದಾರ, ಪ್ರೊ. ಸೂರ್ಯಕಾಂತ ಶೀಲವಂತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
  ಸಂಜೆ 6.30ಕ್ಕೆ ಮಾತೆ ಮಹಾದೇವಿ ತಾಯಿ ಶಿವಶರಣ ಅವರ 48ನೇ ಹುಟ್ಟುಹಬ್ಬ ಅಚರಣೆ ಜರುಗುವುದು. ಪ್ರಭಾವತಿ ತಾಯಿ ಸಾನ್ನಿಧ್ಯದಲ್ಲಿ ಜಗದೇವಿ ದುಬಲಗುಂಡಿ ನೇತೃತ್ವ ವಹಿಸುವರು. ಗಮಕ ಕಲಾ ಪರಿಷತ್ತಿ ಚೆನ್ನಮ್ಮ ವಲ್ಲೆಪೂರೆ, ನಾಗಮ್ಮ ಬಂಗೂರಗಿ ಉಪಸ್ಥಿತರಿರುವರು.
8ರಂದು ಚಿಂತನಗೋಷ್ಠಿ: ಫೆ.8ರಂದು ಬೆಳಗ್ಗೆ 9 ಗಂಟೆಗೆ ಚಿಂತನಗೋಷ್ಠಿ ನಡೆಯುವುದು. ವಿದ್ವಾಂಸಕ ಡಾ. ಕೆ.ಬಿ. ಬ್ಯಾಳಿ ಅಧ್ಯಕ್ಷತೆಯಲ್ಲಿ ಪ್ರೊ. ಸೂಗಯ್ಯ ಹಿರೇಮಠ ಆಶಯ ನುಡಿಗಳನ್ನಾಡುವರು. ಆಧುನಿಕ ವಚನಗಳಲ್ಲಿ ವೈಚಾರಿಕತೆ ಕುರಿತು ಡಾ. ಜಯದೇವಿ ಗಾಯಕವಾಡ, ಆಧುನಿಕ ವಚನಗಳಲ್ಲಿ ಬಂಡಾಯ ಕುರಿತು ಡಾ. ರಘುಶಂಖ ಭಾತಂಭ್ರಾ ಉಪನ್ಯಾಸ ನೀಡುವರು.
ಬೆ.11 ಗಂಟೆಗೆ ಸಾಮೂಹಿಕ ವಿವಾಹ ನಡೆಯಲಿದ್ದು, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅಧ್ಯಕ್ಷತೆಯಲ್ಲಿ ಕೌಠಾದ ಸಿದ್ಧರಾಮ ಶರಣರು ಬೆಲ್ದಾಳ, ಸದಾನಂದ ಅಪ್ಪಗಳು, ವಿಜಯಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಸಂಸದ ಎನ್. ಧರ್ಮಸಿಂಗ್ ಸೇರಿದಂತೆ ಮುಂತಾದ ರಾಜಕೀಯ ಧುರೀಣರು ಪಾಲ್ಗೊಳ್ಳುವರು.
ಆಧುನಿಕ ವಚನ ವಾಚನ ಗೋಷ್ಠಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದ್ದು, ಗಣೇಶ ಅವಧೂತರು, ವಿ. ಸಿದ್ದರಾಮಣ್ಣ, ನಾಗಲಿಂಗ ಕವಿ, ಶಿವಶಂಕರ ಶಿವಾಚಾರ್ಯರು ನೇತೃತ್ವ ವಹಿಸುವರು. ಬಿ.ಎಂ. ಪಾಟೀಲ್ ಅಧ್ಯಕ್ಷತೆಯಲ್ಲಿ ಎಂ.ಜಿ. ಗಂಗನಪಳ್ಳಿ ಆಶಯ ನುಡಿ ಮಾತನಾಡುವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com