ಭಾಲ್ಕಿ: ತಾಲೂಕಿನ ಕೋನಮೆಳಕುಂದಾ ಗ್ರಾಮದಲ್ಲಿ ಸುಮಾರು ರಸಾಯನಿಕ ದ್ರಾವಣದಿಂದ ತುಂಬಿದ್ದ 200 ಡ್ರಮ್ಗಳು ಪತ್ತೆಯಾದ ಘಟನೆ ಗ್ರಾಮದ ಹೊರವಲಯದ ಹೊಲಮೊಂದರಲ್ಲಿ ನಡೆದಿದೆ.
ದಿಲೀಪ (ಆನಂದ) ಪಾಟೀಲ್ ಎಂಬುವರ ಹೊಲದಲ್ಲಿ ಈ ಡ್ರಮ್ಗಳು ಸಿಕ್ಕಿವೆ. ಸಹಿಸಲಾರದಷ್ಟು ಅಸಹ್ಯ ವಾಸನೆಯಿಂದ ತುಂಬಿರುವುದರಿಂದ ಈ ಕೆಮಿಕಲ್ ಯಾವುದಕ್ಕೆ ಸಂಬಂಧಿಸಿವೆ ಎಂಬುದು ಖಚಿತ ಮಾಹಿತಿ ಸಿಕ್ಕಿಲ್ಲ. ಆರೋಪಿ ಸಹ ಸಮರ್ಪಕವಾಗಿ ಉತ್ತರ ನೀಡುತ್ತಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಈ ಸಂಬಂಧ ಧನ್ನೂರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ಬಿ.ಎಸ್. ಮಾಲಗುತ್ತಿ ನೇತ್ರತ್ವದ ತಂಡ ಗ್ರಾಮದಲ್ಲಿ ದಾಳಿ ನಡೆಸಿ ಸುಮಾರು 200 ಡ್ರಮ್ಗಳು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಸಹ ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮಾಲಗುತ್ತಿ ತಿಳಿಸಿದ್ದಾರೆ. ಪಿಎಸ್ಐ ಮಲ್ಲಿಕಾರ್ಜುನ ಯಾತನೂರ ಸಹ ಉಪಸ್ಥಿತರಿದ್ದರು.