ಬೀದರ್: ಜಿಲ್ಲಾ ಗೊಂಡ(ಕುರುಬ) ನೌಕರರ ಸಂಘದ ಸಭೆಯಲ್ಲಿ ಸದಸ್ಯತ್ವ ಪ್ರಕ್ರಿಯೆಯನ್ನು ನಿರಂತರವಾಗಿ ಮುಂದುವರೆಸಲು ನಿರ್ಣಯಿಸಲಾಯಿತು. ನಗರದಲ್ಲಿ ನಡೆದ ಈ ತಾಲೂಕು ಕಾರ್ಯಕಾರಿಣಿ ಪದಾಧಿಕಾರಿಗಳ ಸಭೆಯಲ್ಲಿ ಬಸವರಾಜ ಮಾಳಗೆ ಸಂಘಟನೆ ಕುರಿತು ಮತ್ತು ಗೊಂಡ ಪ್ರಮಾಣ ಪತ್ರದ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ದೆಹಲಿಯ ಘಟನೆ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ಶರಣಪ್ಪ ದಸ್ತಗೊಂಡ ಮಾತನಾಡಿ, ಬಡ್ತಿ ಮೀಸಲಾತಿ ಬಗ್ಗೆ ಸಂವಿಧಾನದಲ್ಲಿರುವ ಅನುಕೂಲ ಮತ್ತು ಅದಕ್ಕೆ ತೊಡಕಾಗಿರುವ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿದರು. ಭಾಲ್ಕಿ ತಾಲೂಕು ಅಧ್ಯಕ್ಷ ನಿರಂಜಪ್ಪ ಪಾತ್ರೆ ಜಿಲ್ಲಾ ಸಂಘದ ನಡವಳಿಕೆಯಂತೆ ಕೆಲಸ ಕಾರ್ಯಗಳನ್ನು ಮಾಡುವ ಕುರಿತು ತಿಳಿಸಿದರು.