ಬೀದರ್: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 64ನೇ ಗಣರಾಜ್ಯೋತ್ಸವದ ಅಂಗವಾಗಿ ಮಾಜಿ ಸಿಎಂ ಹಾಗೂ ಬೀದರ್ ಸಂಸದರಾದ ಧರಂಸಿಂಗ್ ಅವರು ಡಾ. ಬಿಆರ್ ಅಂಬೇಡ್ಕರ್ ಅವರು ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೇರವೇರಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ರಾಜ್ಯದಲ್ಲಿ ಅರಾಜಕತೆ ತಲೆದೋರಿದ್ದು, ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಕುರ್ಚಿಗಾಗಿ ಮತ್ತು ಸ್ವಾರ್ಥ ಪ್ರತಿಷ್ಠೆಗಾಗಿ ಹೊಡೆದಾಡುತ್ತಿದೆ. ಹೀಗಾಗಿ ಬಡವರ, ರೈತರ ಆಶೋತ್ತರಗಳ ಮೇಲೆ ತಣ್ಣೀರೆರಚಿದೆ ಎಂದರು.
ಈ ಸಂದರ್ಭದಲ್ಲಿ ಬೀದರ್ ಶಾಸಕ ರಹೀಮ್ಖಾನ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಶಾಸಕ ಖಾಜಿ ಅರ್ಷದ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದಕುಮಾರ ಅರಳಿ, ರಾಜಶೇಖರ ಪಾಟೀಲ್ ಅಷ್ಟೂರ, ಎಐಸಿಸಿ ಸದಸ್ಯ ಗುರಮ್ಮಾ ಸಿದ್ದಾರೆಡ್ಡಿ, ಕೆಪಿಸಿಸಿ ಸದಸ್ಯ ಖೈಸಾರ ರೆಹಮಾನ್, ಮಹ್ಮದ್ ಸಲೀಮೋದ್ದಿನ್, ಕೆಪಿಸಿಸಿ ಮಹಿಳಾ ಸಂಘಟನಾ ಕಾರ್ಯದರ್ಶಿ ದ್ರೌಪತಿ ದಂಡಿನ್, ಯಶೋದಾ ದಾಸಪ್ಪ, ಕಲಾವತಿ ಪಾಟೀಲ್, ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ ದೇವಪ್ಪ ಮತ್ತಿತರಿದ್ದರು.