'ಸತ್ಸಂಗಕ್ಕಾಗಿ ಹಿಮಾಲಯ ಏರಬೇಕಿಲ್ಲ'

Updated on: 

ಬೀದರ್: ಸತ್ಸಂಗ ಪಡೆಯಲು ಹಿಮಾಲಯ ಪರ್ವತ ಏರಿ ತಪಸ್ಸು ಮಾಡಬೇಕಾಗಿಲ್ಲ, ವೇದ ಗ್ರಂಥಗಳನ್ನು ಓದಬೇಕಾಗಿಲ್ಲ ಶಾಂತತೆ ಮತ್ತು ಸಮಾಧಾನದಿಂದ ಆಸೀನರಾಗುವದರಿಂದ ಸತ್ಸಂಗ ಸಾಧಿಸಬಹುದು ಎಂದು ವಿಜಾಪುರ ಜ್ಞಾನಯೋಗಾಶ್ರವುದ ಪೂಜ್ಯ ಸಿದ್ದೇಶ್ವರ ಸ್ವಾಮಿ ತಿಳಿಸಿದರು.
 ನಗರದ ಅಕ್ಕಮಹಾದೇವಿ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಆಧ್ಯಾತ್ಮಿಕ ಪ್ರವಚನದಲ್ಲಿ ಆಶೀರ್ವಚನ ನೀಡಿ, ಸತ್ಸಂಗದಿಂದ ಭಗಂತನ ಸಾನಿಧ್ಯವನ್ನು ಅನುಭವಿಸಬಹುದು ಎಂದರು.
 ಮನುಷ್ಯನಿಗೆ ಅನುಕೂಲತೆಗಳು ಹೆಚ್ಚಾದಂತೆ ಸಮಯದ ಕೊರತೆ ಸಹ ವೃದ್ಧಿಸುತ್ತ ಹೋಗಿದ್ದು, ಜಗತ್ತಿನಲ್ಲಿ ಕಣ್ಣಿಗ ಸತ್ಯ, ಸೌಂದರ್ಯ ಮತ್ತು ಹೃದಯಕ್ಕೆ ಶಾಂತಿ ಇರಬೇಕು.
 ಕಣ್ಣು ತೆರೆದಾಗ ಸುಂದರವಾದ ನಿಸರ್ಗ ಇರಬೇಕು ಮನಸ್ಸು ಬಿಚ್ಚಿದಾಗ ಪರಮ ಸತ್ಯ, ಶಾಂತತೆಯಿದ್ದಲ್ಲಿ ಮನುಷ್ಯನ ಜೀವನ ಅದ್ಭುತಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು. ನಮ್ಮ ಆಸೆಗಳಿಗೆ ಮಿತಿ ಹೇರದ ನಾವುಗಳಿಂದು “·æÞOÚß’ ಗಳಿಗಾಗಿ ಭಿಕ್ಷಾಪಾತ್ರೆ ಹಿಡಿದು ಹೊರಟಿದ್ದು ಸಮಾಧಾನದಿಂದ ದೂರವಾಗಿದ್ದೇವೆ. ಹೀಗಾಗಿ ಈ ಪಾತ್ರೆ ಕೈ ಬಿಡುವವರೆಗೆ ಸುಖಿಗಳಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
 ಕಾರ್ಯಕ್ರಮದಲ್ಲಿ ಪೂಜ್ಯರಾದ ಶಿವಾನಂದ ಸ್ವಾಮಿ, ಶಿವಯೋಗೇಶ್ವರ ಸ್ವಾಮಿ, ಜ್ಯೋತಿರ್ಮಯಾನಂದ ಸ್ವಾಮಿ ಮತ್ತಿತರರು ಇದ್ದರು. ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳ ಅಧ್ಯಕ್ಷ ಬಿ.ಜಿ ಶೆಟಕಾರ್ ಸ್ವಾಗತಿಸಿ ಬಸವರಾಜ ಧನ್ನೂರ್ ನಿರೂಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com