'ಅಪೌಷ್ಟಿಕ ಮಕ್ಕಳಿಗೆ ಮೊಟ್ಟೆ ವಿತರಿಸಿ'

Updated on: 

ಬೀದರ್: ರಾಜ್ಯ ಸರ್ಕಾರ ನ್ಯಾ. ಎನ್.ಕೆ. ಪಾಟೀಲ್ ಅಧ್ಯಕ್ಷತೆಯಲ್ಲಿ ಅಪೌಷ್ಟಿಕತೆ ತಡೆಗಟ್ಟುವ ನಿಟ್ಟಿನಲ್ಲಿ ಅಪೌಷ್ಟಿಕ ಮಕ್ಕಳಿಗೆ ವಾರಕ್ಕೆ ನಾಲ್ಕು ಮೊಟ್ಟೆ, ಎರಡು ದಿನ ಹಾಲು ಕೋಡಬೇಕೆಂದು ರಾಜ್ಯ ಕೋಳಿ ಸಾಕಾಣಿಕೆದಾರರ ಸಂಘ ಆಗ್ರಹಿಸಿದೆ. ಈ ಕುರಿತು ಸಂಘದ ರಾಜ್ಯಾಧ್ಯಕ್ಷ ಸುನೀಲ ಎಸ್ ನಿಂಗಮ ಹಾಗೂ ರಾಜ್ಯ ಕಾರ್ಯದರ್ಶಿ ಅಂಬಾದಾಸ ಸೋನೆ ಪ್ರಕಟಣೆ ಹೊರಡಿಸಿ, ಬೀದರ್, ಗುಲ್ಬರ್ಗ, ಯಾದಗೀರ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ರು. 52 ಕೋಟಿ ಬಿಡುಗಡೆ ಮಾಡಿ ಡಿ. 1ರಿಂದ ವಾರಕ್ಕೆ ನಾಲ್ಕು ಮೊಟ್ಟೆ 2 ದಿನ ಹಾಲು ಕೊಡಬೇಕೆಂದು ಸಮಿತಿ ನಿರ್ಧರಿಸಿದೆ. ಆದ್ದರಿಂದ ಸಮಿತಿಯ ಆದೇಶದಂತೆ ಅಪೌಷ್ಟಿಕತೆ ಗಮನದಲ್ಲಿ ಇಟ್ಟುಕೊಂಡು ಮಕ್ಕಳಿಗೆ ಮೊಟ್ಟೆ ಕೋಡಬೇಕೆಂದು ಕೋಳಿ ಸಾಕಾಣಿಕೆ ಸಂಘ ಅಧಿಕಾರಿಗಳಿಗೆ ಮನವಿ ಮಾಡಿದೆ.
16ರಂದು ವಲಯ ಸಾಹಿತ್ಯ ಸಮ್ಮೇಳನ
ತಾಲೂಕಿನ ಅಲಿಯಂಬರ ಗ್ರಾಮದಲ್ಲಿ ಫೆ. 16 ರಂದು ಜನವಾಡಾ ವಲಯದ ಪ್ರಥಮ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು, ಇದಕ್ಕೆ ಹಿರಿಯ ಸಾಹಿತಿ ಬಸವರಾಜ ಹದನೂರೆಯವರನ್ನು ಸರ್ವಾನುಮತದಿಂದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಕಸಾಪ ತಾಲೂಕು ಕಾರ್ಯದರ್ಶಿ ಶಾಮರಾವ್ ನೆಲವಾಡೆ ತಿಳಿಸಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಸಂಜೀವಕುಮಾರ ಅತಿವಾಳೆ, ಶ್ರೀಕಾಂತ ಬಿರಾದಾರ, ಪ್ರೊ. ಉಮಾಕಾಂತ ಮೀಸೆ, ಚಂದ್ರಕಾಂತ ಸ್ವಾಮಿ, ರವೀಂದ್ರ ಭಂಡಾರಿ, ಶಂಭುಲಿಂಗ ವಾಲ್ದೊಡ್ಡಿ, ಕೆ. ಗುರುಮೂರ್ತಿ, ಪ್ರತಿಭಾ ಚಾಮಾ, ಶಾಮರಾವ ನೆಲವಾಡೆ, ಬಸಯ್ಯ ಸ್ವಾಮಿ, ವಲಯ ಅಧಕ್ಷ ಕಲ್ಯಾಣರಾವ್ ಉಪ್ಪೆ ಉಪಸ್ಥಿತರಿದ್ದರು.
ಔರಾದ್(ಎಸ್): ಎಸ್‌ಡಿಎಂಸಿ ರಚನೆ
ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜ. 31ಕ್ಕೆ ಎಸ್‌ಡಿಎಂಸಿ ರಚಿಸಲಾಯಿತು. ರವೀಂದ್ರ ರೆಡ್ಡಿ- ಅಧ್ಯಕ್ಷರು, ಚಂದ್ರಕಲಾ ಗಣಪತಿ- ಉಪಾಧ್ಯಕ್ಷರು, ಸದಸ್ಯರಾಗಿ ಪ್ರಕಾಶ ತುಕ್ಕಪ್ಪ, ಸುಭಾಷ, ಈಶ್ವರಿ, ಸಂಜುಕುಮಾರ, ಮಾರುತಿ, ಅಂಜಮ್ಮ, ಬಕ್ಕಮ್ಮ, ರಾಬರ್ಟ್, ಶಬಾನಾಬೇಗಂ, ಸೂರ್ಯಕಾಂತ ಹಾಗೂ ಶೈಲಜಾ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಪಂ  ಪಿಡಿಓ ಸಂತೋಷ ಸ್ವಾಮಿ, ಶಿಕ್ಷಣ ಸಂಯೋಜಕ ವೆಂಕಟೇಶ ಕುಲಕರ್ಣಿ, ಬಗದಲ್ ವಲಯ ಸಂಪನ್ಮೂಲ ವ್ಯಕ್ತಿ ನಾಗಮೂರ್ತಿ, ಮುಖ್ಯಗುರು ಮಾರುತಿ ರಾವ್ ಮಾಳ್ಗೆ,  ಸಿಎಸಿ ಸಮಿತಿ ಅಧ್ಯಕ್ಷೆ ರಿಜವಾನಾಬೇಗಂ, ಶಶಿಕಲಾ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com