ಬೀದರ್: ಗ್ರಂಥಪಾಲಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಶಾಖೆಯ ಸಭೆಯು ಜಿಪಂ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆಯಲ್ಲಿ ನಡೆದು ಸಂಘದ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಪ್ರವೀಣಕುಮಾರ ಮೀರಾಗಂಜಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಾಜಿ ಬಿರಾದಾರ ಪ್ರಕಟಣೆ ಹೊರಡಿಸಿ ಜಿಲ್ಲೆಯ ಕೆಲ ತಾಲೂಕಾದ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಮೋರೆ ದಿಲೀಪಕುಮಾರ- ಗುಲ್ಬರ್ಗ ವಿಭಾಗ ಅಧ್ಯಕ್ಷರು, ಜ್ಞಾನೇಶ್ವರ ಬಾಚೆಪಳ್ಳಿ- ಭಾಲ್ಕಿ ತಾ. ಅಧ್ಯಕ್ಷರು, ಲಕ್ಷ್ಮೀ ಬಾವಗೆ- ಬೀದರ್ ತಾ. ಮಹಿಳಾ ಅಧ್ಯಕ್ಷರು, ಶಿವಕುಮಾರ ಎಂ ಜಿರ್ಗೆ- ಜಿಲ್ಲಾ ಖಜಾಂಚಿ, ಅನೀಲಕುಮಾರ ಭಗದೂರೆ- ಸಹ ಖಜಾಂಚಿ, ಬಸವರಾಜ ನಾವದೇಗರಿ- ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು ಎಂದರು.
ನಾಳೆ ವಾರ್ಷಿಕೋತ್ಸವ
ಹುಮನಾಬಾದ್: ಪಟ್ಟಣದ ಶಕುಂತಲಾ ಪಾಟೀಲ್ ವಸತಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವು ಫೆ.2ರ ಸಂಜೆ 6ಕ್ಕೆ ನಡೆವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಜಾಫರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳವರು. ಸಂಸ್ಥೆಯ ಮುಖ್ಯ ದತ್ತಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಹುಮನಾಬಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಶಾಸಕ ರಾಜಶೇಖರ ಪಾಟೀಲ್, ಪೂರ್ಣಿಮಾ ಜಾರ್ಜ್, ಡಾ. ಚಂದ್ರಶೇಖರ ಪಾಟೀಲ್ ಅತಿಥಿಗಳಾಗಿ ಭಾಗವಹಿಸುವರು.