ಕ.ಪ್ರ. ವಾರ್ತೆ ್ಣ ಬೀದರ್ ್ಣ ಆ.3
ಪತ್ರಕರ್ತನ ಲೇಖನ, ಅಂಕಣಗಳು ಸಮಾಜಕ್ಕೆ ಬೆಳಕು ನೀಡುವ ಕಾರ್ಯ ಮಾಡುತ್ತವೆ. ಆದ್ದರಿಂದಲೇ ಸಮಾಜದಲ್ಲಿ ಬದಲಾವಣೆಯಾಗಬೇಕಾದರೆ ಪತ್ರಕರ್ತರ ಪಾತ್ರ ಮುಖ್ಯ ಎಂದು ಸಂಸದ ಭಗವಂತ ಖೂಬಾ ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಗರದ ಎಸ್‌ಆರ್‌ಎಸ್ ಪಂಕ್ಷನ್ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪತ್ರಕರ್ತ ಸಮಾಜ ಕಟ್ಟುವ ಕಿಚ್ಚು ಇಟ್ಟುಕೊಂಡು ಯಾವುದೇ ಆರ್ಥಿಕ ಲಾಭದ ಪಡೆಯದೇ ತನ್ನದೇ ಆದ ಕಾರ್ಯ ನಿರ್ವಹಿಸುತ್ತಾನೆ ಎಂದರು.
ಬೆದರಿಕೆ ಮೆಟ್ಟಿ ನಿಲ್ಲಿ: ಸಮಾಜ ವಿರೋಧಿ ಶಕ್ತಿಗಳನ್ನು ಎದುರಿಸಿ ಸುದ್ದಿ ಮಾಡುವ ಜವಾಬ್ದಾರಿ ಪತ್ರಕರ್ತನ ಮೇಲಿದೆ. ಕೆಲವರು ಸಮಾಜದ ಹಿತ ಸಹಿಸಲಾರದವರು ಪತ್ರಕರ್ತರಿಗೆ ಹೆದರಿಸುವ ಕೆಲಸ ಮಾಡುತ್ತಾರೆ, ಅದು ಸರಿಯಲ್ಲ. ಇಂಥವರಿಗೆ ಮೆಟ್ಟಿ ನಿಂತು ಸುದ್ದಿ ಮಾಡುವುದೇ ನಿಜವಾದ ಪತ್ರಕರ್ತನ ಕರ್ತವ್ಯ ಎಂದು ಹೇಳಿದರು.
ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ, ಶಾಸಕ ಪ್ರಭು ಚವ್ಹಾಣ, ಬೀದರ್ ಸಹಾಯಕ ಆಯುಕ್ತೆ ಆರತಿ ಆನಂದ, ಜಿಪಂ ಸಿಇಒ ಉಜ್ವಲ್‌ಕುಮಾರ ಘೋಷ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಧೀರಕುಮಾರ ರೆಡ್ಡಿ, ಉಪ ಅರಣ್ಯ ಸಂಕ್ಷಣಾಧಿಕಾರಿ ಸುನಿಲ್ ಪನ್ವಾರ್ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರಾದ ಮಲ್ಲಿಕಾರ್ಜುನ ಬಿರಾದಾರ, ಡಾ. ರಜನೀಶ್ ವಾಲಿ, ನಾಗೇಶ ಪ್ರಭಾ, ಮಲ್ಲಿಕಾರ್ಜುನ ಮರಕಲೆ, ಶಶಿಕಾಂತ್ ಬಂಬುಳಗೆ, ಸತೀಶ್ ಪಾಟೀಲ್, ಸುಜಾವುದ್ದೀನ್, ಶರಣಪ್ಪ ಚಿಟ್ಮೆ, ಸಂಜಯ್ ದಂತಕಾಳೆ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಅಧ್ಯಕ್ಷೆ ನೀಲಮ್ಮ ವಡ್ಡೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಮಾಳಪ್ಪ ಅಡಸಾರೆ, ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ ಡಿ.ಕೆ. ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಕುಮಾರ ಪಾಟೀಲ್ ಸಂಗಮ, ಕಾನೂನು ಸಲಹೆಗಾರ ಕಾಜಿ ಅಲಿಯೋದ್ದೀನ್(ಅಲಿಬಾಬಾ) ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಚ್.ಜಿ. ರವಿರಾಜ್ ಸ್ವಾಗತಿಸಿದರು. ನಾಗೇಶ ಪ್ರಭಾ ನಿರೂಪಿಸಿ, ವಂದಿಸಿದರು.
Advertisement