ಕ.ಪ್ರ. ವಾರ್ತೆ ್ಣ ಬೀದರ್ ್ಣ ಆ.3
ಕೊನೆಗೂ ಮುಸುಕಿನ ಗುದ್ದಾಟ ಬಯಲಾಗಿದೆ. ಸ್ವಪಕ್ಷದ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ವಿರುದ್ಧ ಬಿಜೆಪಿ ನೇರ ಹೋರಾಟಕ್ಕಿಳಿದಿದೆ. ಡಿಸಿಸಿ ಬ್ಯಾಂಕ್ ಹಾಗೂ ನಾರಂಜಾ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಲೋಕಾಯುಕ್ತ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದೆ.
ನಾಗಮಾರಪಳ್ಳಿ ಅಧ್ಯಕ್ಷರಾಗಿರುವ ಡಿಸಿಸಿ ಬ್ಯಾಂಕ್ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಭಾರಿ ಅಕ್ರಮವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಆರಂಭಿಸಿದ್ದ ಹೋರಾಟವನ್ನು ಇದೀಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಗಂದಗೆ, ಔರಾದ್ ಶಾಸಕ ಪ್ರಭು ಚವ್ಹಾಣ ಹಾಗೂ ನೂತನ ಸಂಸದ ಭಗವಂತ ಖೂಬಾ ಅವರು ಮುಂದುವರೆಸಿದಂತೆ ತನಿಖೆಯ ಮಾತುಗಳನ್ನಾಡಿದ್ದಾರೆ.
ತಾರತಮ್ಯ, ಬೇಕಾಬಿಟ್ಟಿ ಮನ್ನಾ: ಸಂಸದ ಭಗವಂತ ಖೂಬಾ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾರತಮ್ಯರಹಿತವಾಗಿ ರೈತರಿಗೆ ಸೌಲಭ್ಯಗಳನ್ನು ಒದಗಿಸದ ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಅನೇಕ ವರ್ಷಗಳಿಂದ ರೈತರಿಗಿಂತ ಉದ್ಯೋಗಸ್ಥರಿಗೆ ಸಾಲ ನೀಡಿದೆ ಎಂದು ಆರೋಪಿಸಿದರು.
ಸಾಲದ ಮೊತ್ತಕ್ಕೆ ತಕ್ಕಂತೆ ಸಾಲ ಪಡೆಯುವವರ ಆಸ್ತಿಯನ್ನು ಭದ್ರತೆಗಾಗಿ ಅಡವಿಟ್ಟುಕೊಳ್ಳಬೇಕಾದ ನಿಯಮ ಗಾಳಿಗೆ ತೂರಿದ್ದಲ್ಲದೆ ಬೇಕಾದವರಿಗೆ ಸುಸ್ತಿಯಾಗಿ ಒಟಿಎಸ್ ಮೂಲಕ ಬಡ್ಡಿ ಹಾಗೂ ಸಾಲ ಮನ್ನಾ ಮಾಡಿದೆ. ಅಲ್ಲದೆ ಬ್ಯಾಂಕಿನ ಆಡಳಿತ ಮಂಡಳಿ ತಮ್ಮ ಹಿತ ಕಾಪಾಡುವವರಿಗೆ ಕಾನೂನು ಬಾಹಿರವಾಗಿ ಸಾಲ ನೀಡಿದೆ. ಎಲ್ಲ ರೀತಿಯ ಸಾಲ ಮನ್ನಾ ಕೂಡ ಮಾಡಲಾಗಿದೆ ಎಂದು ದೂರಿದ್ದಾರೆ. ಕಳೆದ 2001ರಿಂದ 2005ರ ಅವಧಿಯಲ್ಲಿ ಬ್ಯಾಂಕಿನ ಕೃಷಿಯೇತರ ಸಾಲವನ್ನು ಏಕಕಾಲಕ್ಕೆ ತೀರುವಳಿ ಎಂದು ನಿಯಮಬಾಹಿರವಾಗಿ ಸಾಲಮನ್ನಾ ಮಾಡಿದ್ದು ಹಾಗೂ ಸಾಲ ಭದ್ರತೆ ಪಡೆಯದೆ ಇರುವ ಪ್ರಕರಣಗಳಿಗೆ ಸಂಬಂಧಿಸಿ ಬ್ಯಾಂಕಿನ ಆಡಳಿತ ಮಂಡಳಿ ವಿರುದ್ಧ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಅನ್ವಯ ವಿಚಾರಣೆ ನಡೆಸಿ ಅಕ್ರಮಗಳನ್ನು ಬೆಳಕಿಗೆ ತಂದಿತ್ತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಗಂದಗೆ, ಶಾಸಕ ಪ್ರಭು ಚವ್ಹಾಣ ಇದ್ದರು.
Advertisement