ಹುಮನಾಬಾದ್: ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಅಗತ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಂಸದ ಭಗವಂತ ಖೂಬಾ ತಿಳಿಸಿದರು.
ತಾಲೂಕಿನ ಚಿಟಗುಪ್ಪಾದಲ್ಲಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಕಚೇರಿ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ರಾಜಶ್ರೀ ಕೇದರನಾಥ, ರೇಶ್ಮಾ ಖೂತುಬುದ್ದಿನ್, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಾಟೀಲ್, ಬಸವಂತರಾಯ ದೇಶಮುಖ, ಅಶೋಕ ಗುತ್ತೆದಾರ, ಶಿವಾನಂದ ಮಂಠಾಳಕರ್, ಸೈಯದ್ ಬುಖಾರಿ, ಸೂರ್ಯಕಾಂತ ಮಠಪತಿ, ಗೋವಿಂದ ಬೊರಾಳೆ, ವಿರೇಶ ಹಲವಾಯಿ, ವೀರಣ್ಣ ಚಾಮರೆಡ್ಡಿ, ಸುಭಾಷ ಕುಂಬಾರ ಸೇರಿದಂತೆ ಪುರಸಭೆ ಸದಸ್ಯರು ಇದ್ದರು. ಪುರಸಭೆ ಮುಖ್ಯ ಅಧಿಕಾರಿ ಮಹ್ಮದ ಯುಸುಫ್ ಸ್ವಾಗತಿಸಿದರು. ಶಿವಕುಮಾರ ನಿರೂಪಿಸಿ, ವಂದಿಸಿದರು.
Advertisement