ಬ್ರಿಮ್ಸ್ ನಿರ್ದೇಶಕನ ವಿರುದ್ಧ ಸಿಬಿಐ ತನಿಖೆಯಾಗಲಿ

Updated on

ಕ.ಪ್ರ. ವಾರ್ತೆ ್ಣ ಬೀದರ್ ್ಣ ಆ.5
ಬ್ರಿಮ್ಸ್ ಕಾಲೇಜಿನ ನಿರ್ದೇಶಕ ಬಿ.ಒ. ಹಣಮಂತಪ್ಪ ಅವರು ತಮ್ಮ ಅವಧಿಯಲ್ಲಿ ಸುಮಾರು 10 ಕೋಟಿ ಅವ್ಯವಹಾರ ಮಾಡಿದ್ದಾರೆ. ಅದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಕನ್ನಡ ಸಮರ ಸೇನೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಸೇನೆಯ ಜಿಲ್ಲಾಧ್ಯಕ್ಷ ಅವಿನಾಶ ದೀನೆ ನೇತೃತ್ವದಲ್ಲಿ ನಗರದ ಡಾ. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ಆರಂಭಿಸಿ ಕೆಲಹೊತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ, ಬೀದರ್ ವೈದ್ಯಕೀಯ ಕಾಲೇಜಿನ ಎರಡನೇ ಹಂತದ ಕಾಮಗಾರಿಯಲ್ಲಿ ಅನವಶ್ಯಕವಾಗಿ ಐಗಖಈಔ ಕಂಪನಿಗೆ 3.40 ಕೋಟಿ ಹಣ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಿಂದ ಶುಲ್ಕ ಪಡೆಯದೆ ತರಬೇತಿ: ಬ್ರಿಮ್ಸ್ ಕಾಲೇಜಿಗೆ ಉಪಯೋಗ ಇಲ್ಲದಂತಹ ವಸ್ತುಗಳನ್ನು ಖರೀದಿಸಿ ಅದಕ್ಕೆ ಟೆಂಡರ್ ಮತ್ತು ಕೋಟೇಷನ್ ಪಡೆದುಕೊಳ್ಳದೆ 56 ಲಕ್ಷ ನಗದು ರೂಪದಲ್ಲಿ ಪಾವತಿಸಿ ದುರ್ಬಳಕೆ ಮಾಡಿದ್ದಾರೆ. ಬೀದರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ತರಬೇತಿಗಾಗಿ ಕಾಲೇಜುಗಳ ಶುಲ್ಕ 56 ಲಕ್ಷ ಪಡೆಯದೆ ಅವರಿಗೆ ತರಬೇತಿ ನೀಡಲು 2009-10ನೇ ಸಾಲಿನಲ್ಲಿ ಅವಕಾಶ ನೀಡಿದ್ದಾರೆ ಎಂದು ದೂರಿದರು.
ಅನವಶ್ಯಕವಾಗಿ ಕಾಲೇಜಿನ ಹಾಗೂ ಕ್ವಾರ್ಟರ್ಸ್ ದುರಸ್ತಿ ವೆಚ್ಚಕ್ಕೆಂದು 4.58 ಕೋಟಿ ಟೆಂಡರ್ ಕರೆಯದೆ ಕಾಮಗಾರಿ ನಡೆಸಿ ಹಣ ನೀಡಿದ್ದಾರೆ. ಬಾಲಕರ ಮತ್ತು ಬಾಲಕಿಯರ ವಸತಿ ನಿಲಯದ ಉಸ್ತುವಾರಿ ಹಾಗೂ ಇನ್ನಿತರ ಕೆಲಸಗಳಿಗೆ ಟೆಂಡರ್ ಕರೆಯದೆ 2.91 ಲಕ್ಷ ಹಣ ದುಂದುವೆಚ್ಚ ಮಾಡಿ ಹಾಗೂ ಹೊರ ಗುತ್ತಿಗೆ ನೇಮಕಗೊಂಡ ಕೆಲಸಗಾರರಿಗೆ ಕಡಿಮೆ ಸಂಬಳ ನೀಡಿ ಹೆಚ್ಚು ಕೆಲಸ ಮಾಡಿಸಿಕೊಂಡಿದ್ದಾರೆ ಎಂದರು.
ಸಿಬಿಐ ತನಿಖೆ ಆಗಲಿ: ಬ್ರೀಮ್ಸ್ ನಿರ್ದೇಶಕರು ತಮ್ಮ ಆಡಳಿತಾವಧಿಯಲ್ಲಿ ಸರಿಸುಮಾರು 10 ಕೋಟಿ ಅವ್ಯವಹಾರ ನಡೆಸಿದ್ದಾರೆ. ಇದರ ಬಗ್ಗೆ ಸಿಐಜಿ ತನ್ನ ವರದಿಯಲ್ಲಿ ಎಲ್ಲ ಮಾಹಿತಿ ನೀಡಿದರೂ ಸರ್ಕಾರವಾಗಲಿ ಹಾಗೂ ಸಂಬಂಧಪಟ್ಟ ಸಚಿವರಾಗಲಿ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ಈ ಕುರಿತು ಕುಲಂಕುಶವಾಗಿ ಪರಿಶೀಲಿಸಿ ಸಿಬಿಐ ತನಿಖೆ ಆಗಲೇಬೇಕೆಂದು ಕನ್ನಡ ಸಮರ ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.
ಸೇನೆಯ ಜಿಲ್ಲಾಧ್ಯಕ್ಷ ಅವಿನಾಶ ದೀನೆ, ಸಂತೋಷ ಮಾಮಡಗಿ, ಸಂಜು ಲಕ್ಷ್ಮೀ ದೊಡ್ಡೆ, ರಾಜಕುಮಾರ ಚಾಲಿಕರ, ವೀಂದ್ರ ದೇವಘಡೆ, ಚಂದು ಕುಂದೆ ಬಿ, ಸುನೀಲ ಬರೂರಕರ, ಟಿ.ಎಸ್. ಅನೀಲಕುಮಾರ, ಹಣಮಂತ ಶೇರಿಕಾರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com