ಬೀದರ್: ಜೆಸ್ಕಾಂನ ಬೀದರ್ ಕಾರ್ಯ ಮತ್ತು ಪಾಲನೆ ವೃತ್ತ ಕಚೇರಿಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಉಪ ವಿಭಾಗಗಳಲ್ಲಿ ಆ.11ರಿಂದ ವಿದ್ಯುತ್ ಗ್ರಾಹಕರ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಬೀದರ್ ವಿಭಾಗದ ಗ್ರಾಹಕರ ಸಭೆ ಆ.11ರಂದು ಬೆಳಗ್ಗೆ 9 ಗಂಟೆಗೆ ಬೀದರ್ ಉಪ ವಿಭಾಗದಲ್ಲಿ, ಮಧ್ಯಾಹ್ನ 12 ಗಂಟೆಗೆ ಕಮಠಾಣ ಉಪ ವಿಭಾಗದಲ್ಲಿ, ಆ.12ರಂದು ಬೆಳಗ್ಗೆ 9 ಗಂಟೆಗೆ ಔರಾದ್ ಉಪ ವಿಭಾಗದಲ್ಲಿ ಹಾಗೂ ಆ.13ರಂದು ಬೆಳಗ್ಗೆ 9 ಗಂಟೆಗೆ ಭಾಲ್ಕಿ ಉಪ ವಿಭಾಗದಲ್ಲಿ ಗ್ರಾಹಕರ ಸಭೆ ನಡೆಯಲಿದೆ.
ಹುಮನಾಬಾದ್ ವಿಭಾಗದ ಗ್ರಾಹಕರ ಸಭೆಯು ಆ.18ರಂದು ಬೆಳಗ್ಗೆ 9 ಗಂಟೆಗೆ, ಬಸವಕಲ್ಯಾಣ ಉಪ ವಿಭಾಗದಲ್ಲಿ ಆ.18ರಂದು ಮಧ್ಯಾಹ್ನ 12 ಗಂಟೆಗೆ, ಹುಮನಾಬಾದ್ ಉಪ ವಿಭಾಗದಲ್ಲಿ ಹಾಗೂ ಆ.19ರಂದು ಬೆಳಗ್ಗೆ 9 ಗಂಟೆಗೆ ಮನ್ನಾಏಖೇಳ್ಳಿ ಉಪ ವಿಭಾಗದಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement