ಹುಮನಾಬಾದ್: ಶರಣರು ಮನುಕುಲ ಅಭಿವೃದ್ಧಿಗೆ ವಚನಗಳ ಮೂಲಕ ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ವಚನಗಳ ಮಹತ್ವ ತಿಳಿದುಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ಸಂಸದ ಭಗವಂತ ಖೂಬಾ ಹೇಳಿದರು.
ತಾಲೂಕಿನ ಬೋರಾಳ ಗ್ರಾಮದಲ್ಲಿ ಅಶ್ವಾರೂಢ ಬಸವೇಶ್ವರರ ಮೂರ್ತಿ ಅನಾವರಣಗೊಳಿಸಿ ಮಾತನಾಡಿ, ಶರಣರ ವಚನಗಳನ್ನು ತಿಳಿದುಕೊಳ್ಳಬೇಕು. ಜಗತ್ತು ಎದುರಿಸುತ್ತಿರುವ ಭಯೋತ್ಪಾದನೆ, ಭಷ್ಟಾಚಾರದಂಥ ಸಮಸ್ಯೆ ಹೋಗಲಾಡಿಸಬೇಕಾದರೆ, ಶರಣರ ತತ್ವಗಳಿಂದ ಮಾತ್ರ ಸಾಧ್ಯ ಎಂದರು.
ಜಿಪಂ ಸದಸ್ಯ ಡಾ. ಶೈಲೇಂದ್ರ ಬೇಲ್ದಾಳೆ ಮಾತನಾಡಿ, ಬಸವಾದಿ ಶರಣರು ಯಾವುದೇ ಜಾತಿ, ಮತಕ್ಕೆ ಸಿಮೀತವಾಗಿರದೆ ಮನುಕುಲದ ಉದ್ಧಾರಕ್ಕಾಗಿ ಅವರ ವಚನಗಳನ್ನು ಓದಿ ತಿಳಿದುಕೊಳ್ಳುವ ಜತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಹುಲಸೂರಿನ ಶಿವಾನಂದ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಬಸವರಾಜ ನೀಲಾ, ಮೂರ್ತಿ ಪ್ರತಿಷ್ಠಾಪನೆ ಸಮಿತಿ ಅಧ್ಯಕ್ಷ ಸಂತೋಷ ಭೂತಪೂರ, ದಶರಥ ಬಿರಾದಾರ, ಚಂದ್ರಶೆಟ್ಟಿ ರಾಸೂರ, ದಶರಥ ಗಾರಂಪಳ್ಳಿ, ರಾಜಕುಮಾರ ಪಾಟೀಲ್, ರೇವಣಸಿದ್ದಯ್ಯ ಸ್ವಾಮಿ, ಗುರುನಾಥ ಭೂತಪುರ, ಪುಂಡಲೀಕಪ್ಪ ಭೂತಪುರ, ಸಂಜುಕುಮಾರ ಪಾಲ್ಗೊಂಡಿದ್ದರು.
Advertisement