ಬಸವಕಲ್ಯಾಣ: ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದಾನ ಮಾಡುವುದಕ್ಕಿಂತ ಉತ್ತಮ ಕಾರ್ಯ ಮತ್ತೊಂದಿಲ್ಲ ಎಂದು ಶಾಸಕ ಮಲ್ಲಿಕಾರ್ಜುನ ಅವರ ತಾಯಿ ನಿರ್ಮಲಾ ಖೂಬಾ ಅಭಿಪ್ರಾಯಪಟ್ಟರು.
ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ತಾಲೂಕಿನ ಜೆಡಿಎಸ್ ಕಾರ್ಯಕರ್ತರಿಂದ ಶಾಸಕ ಮಲ್ಲಿಕಾರ್ಜುನ ಖೂಬಾ ಅವರ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಕೆಲ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ರಕ್ತದಾನ ಮಾಡಿದರೆ ಜೀವ ರಕ್ಷಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ರಕ್ತಭಂಡಾರಗಳಲ್ಲಿ ಶೇಖರಣೆಯಿದ್ದರೆ ಕೂಡಲೇ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ರಕ್ತದಾನ ಶಿಬಿರದಿಂದ ಅನೇಕ ಲಾಭಗಳಿವೆ ಎಂದ ಅವರು, ಬಹಳಷ್ಟು ಕಡೆಗಳಲ್ಲಿ ರಕ್ತ ಸಿಗುವುದಿಲ್ಲ. ಮುಂದೆ ಇಂತಹ ಸಮಸ್ಯೆ ನಮ್ಮ ತಾಲೂಕಿನ ಜನರಿಗೂ ಆಗಬಹುದು. ಆದ್ದರಿಂದ ರಕ್ತದಾನದಂತಹ ಕಾರ್ಯಕ್ರಮವನ್ನು ಶಾಸಕ ಖೂಬಾ ಈ ಹಿಂದೆಯೂ ಹಮ್ಮಿಕೊಂಡಿದ್ದರು ಎಂದು ಸಂತಸ ವ್ಯಕ್ತಪಡಿಸಿದರು.
ರಕ್ತದಿಂದ ಜೀವದಾನ ಮಾಡಿ: ವೈದ್ಯಾಧಿಕಾರಿ ಡಾ. ಭೂರಾಳೆ ಮಾತನಾಡಿ, ಶಿಬಿರದಿಂದ ರಕ್ತ ಸಂಗ್ರಹಿಸಿ ಘಟಕದಲ್ಲಿ ಶೇಖರಣೆ ಮಾಡಬಹುದು. ನಂತರ ಯಾವುದೇ ತುರ್ತು ಸಂದರ್ಭದಲ್ಲಿ ನಮಗೆ ಸಹಕಾರಿಯಾಗುತ್ತದೆ. ಅಲ್ಲದೇ ಬೇರೆ ರೋಗಿಗಳಿಗೆ ಜೀವದಾನ ನೀಡುವಂತಾಗುತ್ತದೆ. ಆದ್ದರಿಂದ ಪ್ರತಿವರ್ಷ ಇಂತಹ ಶಿಬಿರಗಳು ನಡೆದರೆ ರಕ್ತದ ಕೊರತೆ ಬರುವುದಿಲ್ಲ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶಪ್ಪ ಬಿರಾದಾರ ಮಾತನಾಡಿ, ಶಾಸಕರು ಇದಕ್ಕಿಂತ ಮುಂಚೆ ತಮ್ಮ ಅಧಿಕಾರಾವಧಿಯಲ್ಲಿ ಬಸವಕಲ್ಯಾಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅದರಂತೆ ಈಗಲೂ ತಾಲೂಕಿನ ಸಮಗ್ರ ಅಭಿವೃದ್ಧಿ ಗುರಿ ಹೊಂದಿದ್ದಾರೆ ಎಂದರು.
ಪಕ್ಷದ ತಾಲೂಕಾಧ್ಯಕ್ಷ ಶಬ್ಬೀರ್‌ಪಾಶಾ ಮುಜಾವರ ಪ್ರಾಸ್ತಾವಿಕ ಮಾತನಾಡಿದರು. ನಗರಸಭೆ ಸದಸ್ಯೆ ಕರುಣಾ ಗ್ಯಾನೋಬಾ, ಇಸ್ಮಾಯಿಲ್ ಬೆಳಕುಣಿ, ಮಾಧವರಾವ ಹಸೂರೆ, ಡಾ. ಎಸ್.ಮಠಪತಿ, ತಾಲೂಕು ವೈದ್ಯಾಧಿಕಾರಿ ಶರಣಪ್ಪ ಮುಡಬಿ ಮತ್ತಿತರರು ಉಪಸ್ಥಿತರಿದ್ದರು. ಸಂಜು ಗಾಯಕವಾಡ ವಂದಿಸಿದರು.
ರಕ್ತದಾನ: ಈ ವೇಳೆ ಬಸವರಾಜ ಭಾಲ್ಕಿಲೆ, ಡಾ. ಚಂದ್ರಕಾಂತ ಮೇದೆ, ಸಂಜು ಗಾಯಕವಾಡ, ಶಿವರಾಜ ಭಾಲಕಿಲೆ, ಭಾಗಪ್ಪ ಜಮಾದಾರ, ಜ್ಞಾನೇಶ್ವರ ಮುಳೆ, ಪುಷ್ಪರಾಜ ಹಾರಕೂಡೆ, ಬಸವರಾಜ ಖೂಬಾ, ಧನರಾಜ ಫಡೆ, ವಿಜಯಕುಮಾರ ಚಿವಡೆ, ಸಂದೀಪ ಕೀಲಾರೆ, ಸ್ಟಾಪನರ್ಸ ಭೀಮರಾವ ಕುದರೆ ಸೇರಿದಂತೆ ಒಟ್ಟು 37 ಜನರು ರಕ್ತದಾನ ಮಾಡಿದರು.
ಡಾ. ಸದಾನಂದ ಪಾಟೀಲ್, ಗಿರೀಶ್ ಜಮಾದಾರ, ಅಶ್ವಿನಿ, ಪೂಜಾ, ಸಿಸ್ಟರ್ ವೇರುನಿಕಾ, ಅರವಿಂದ ಕಾಂಬಳೆ, ಮಹ್ಮದ್ ಹಾಗೂ ಆರೋಗ್ಯ ಸಿಬ್ಬಂದಿ ಶಿಬಿರದಲ್ಲಿ ಉಪಸ್ಥಿತರಿದ್ದರು.
Advertisement