ಬಸವಕಲ್ಯಾಣ: ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಹಸಿರೆಲೆ, ಎರೆಹುಳು, ತ್ತಿಪ್ಪೆ ಗೊಬ್ಬರ ಬಳಸುವುದರಿಂದ ಭೂಮಿ ತೇವಾಂಶ ಹೆಚ್ಚಳ ಮಾತ್ರವಲ್ಲದೆ ಉತ್ತಮ ಇಳುವರಿ ಸಾಧ್ಯ ಎಂದು ಬಸವಕಲ್ಯಾಣ ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶತ್ರುಘನ್ ಸದುವಾಲೆ ತಿಳಿಸಿದರು. ತಾಲೂಕಿನ ಪರತಾಪುರ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಶಾಂತಿಶ್ವರಿ ಸ್ವಯಂ ಸೇವಾ ಸಂಸ್ಥೆಯಿಂದ ಶುಕ್ರವಾರ ರೈತರಿಗೆ ಹಮ್ಮಿಕೊಂಡ ಸಾಮರ್ಥ್ಯವೃದ್ಧಿ ತರಬೇತಿ ಹಾಗೂ ಕಿಟ್ ಮತ್ತು ಬ್ರೊಚರ್ ಬಿಡುಗಡೆಗೊಳಿಸಿ ಮಾತನಾಡಿ, ಬಿತ್ತನೆ ಪೂರ್ವ ರೈತರಿಗೆ ಬೀಜೋಪಚಾರ ಮಾಡುವುದರಿಂದ ಬೆಳೆ ರೋಗ ಮುಕ್ತವಾಗಿರುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ರೈತ ಮುಖಂಡ ಸುಭಾಷ ರಗಟೆ ಮಾತನಾಡಿ, ಸಾವಯವ ಕೃಷಿಯ ಮಹತ್ವ ವಿವರಿಸಿದರು. ಪ್ರಗತಿ ಪರ ರೈತ ದಯಾನಂದ ನೇಳಗೆ ಮಾತನಾಡಿ, ಇಂದಿನ ದಿನಗಳಲ್ಲಿ ಸಾವಯವ ಕೃಷಿ ತತ್ವಗಳು ಮತ್ತು ಅವಶ್ಯಕತೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷೆ ಗುರಮ್ಮ ಮುರಡೆ ಉದ್ಘಾಟಿಸಿದರು. ಪಿಡಿಒ ರಮೇಶ ಕಾಂಬಳೆ, ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಖಂಡೆರಾವ್ ಕುಲಕರ್ಣಿ, ಕರಬಸಯ್ಯ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ರತನ್ಕುಮಾರ್, ಶ್ರೀಮಂತ ಪರತಾಪುರ, ರಾಮದಾಸ, ಶಿವಶರಣ ಬೆಲೂರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶ್ರೀನಿವಾಸ ಖಾಪರೆ ಸ್ವಾಗತಿಸಿದರೆ, ಶಿವಕುಮಾರ ಮಠಪತಿ ನಿರೂಪಿಸಿದರು. ಶರಣಪ್ಪಾ ಬೆಲೂರೆ ವಂದಿಸಿದರು.