ಸಂಸ್ಕಾರವಿದ್ದಲ್ಲಿ ಸನ್ಮಾರ್ಗ

Updated on: 

ಕ.ಪ್ರ. ವಾರ್ತೆ ್ಣ ಬಸವಕಲ್ಯಾಣ ್ಣ ಜು.13
ಗುರುವಿನ ಮಹತ್ವ ದೊಡ್ಡದು. ಕತ್ತಲಿನಲ್ಲಿ ಬೆಳಕಿನಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಶಕ್ತಿ ಗುರುವಿಗಿದೆ ಎಂದು ಬಸವಕಲ್ಯಾಣದ ಸಿದ್ದರಾಮೇಶ್ವರ ಸ್ವಾಮಿಗಳು ನುಡಿದರು.
ಪಟ್ಟಣದ ಹೊರವಲಯದಲ್ಲಿರುವ ಬಸವಧರ್ಮ ಪೀಠ ಬಸವ ಮಹಾಮನೆಯಲ್ಲಿ ಹಮ್ಮಿಕೊಂಡ ಗುರು ಪೂರ್ಣಿಮೆ ಮತ್ತು ಅಲ್ಲಮಪ್ರಭುದೇವರ ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ವಿಶ್ವದ ಅನೇಕ ಧರ್ಮಗಳು ಗುರು ಪರಂಪರೆಯನ್ನು ಒಪ್ಪಿಕೊಂಡು ಗುರು ನೀಡಿದ ಧರ್ಮ ಸಂಸ್ಕಾರ ಪಡೆದುಕೊಂಡು ಸನ್ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂದರು.
ಸೂಕ್ತ ದಾರಿ ತೋರುವವನೇ ಗುರು: ಆಡಂಬರದ ಜೀವನ ನಡೆಸುವ ಗುರು ನಮಗೆ ಬೇಕಿಲ್ಲ. ಬದುಕಿನ ಸರಳ ಮಾರ್ಗ ತೋರಿ ಭಕ್ತರ ಹೃದಯವನ್ನು ಗೆಲ್ಲುವನೇ ನಿಜವಾದ ಗುರು ಆಗಲಿಕ್ಕೆ ಸಾಧ್ಯ ಎಂದು ಗುರುವಿನ ಕರ್ತವ್ಯ ಮತ್ತು ಲಕ್ಷಣಗಳನ್ನು ಸಮಗ್ರವಾಗಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರುಕ್ಕಪ್ಪ ಬಾಳಿ, ಅಲ್ಲಮಪ್ರಭುದೇವರು ವಿಶ್ವಕ್ಕೆ ಜ್ಞಾನಬೋಧನೆ ಮಾಡಿದರು. ಅನೇಕ ಸಾಧಕರನ್ನು ತನ್ನ ಜ್ಞಾನನದ ಬಲದಿಂದ ಅವರ ಅಜ್ಞಾನ ತೊಲಗಿಸಿ ನಿಜ ಬೋಧನೆಯನ್ನು ನೀಡಿ ಕಲ್ಯಾಣಕ್ಕೆ ಧಾವಿಸುವಂತೆ ಮಾಡಿದರು. ಆದ್ದರಿಂದಲೇ ಬಸವಣ್ಣನವರು ಅವರನ್ನು ಶೂನ್ಯ ಪೀಠಾಧೀಶರನ್ನಾಗಿ ಮಾಡಿದರು ಎಂದರು.
ಮೋಕ್ಷದ ಪಥ ತೋರಿದರು: ಬಸವಪ್ರಭು ಸ್ವಾಮಿ ಸಮ್ಮುಖ ವಹಿಸಿ ಮಾತನಾಡಿ, ಗುರುನಾದವರು ಶಿಷ್ಯನಿಗೆ ಆಯಾ ಧರ್ಮ ಸಂಸ್ಕಾರಗಳಂತೆ ವೇದದೀಕ್ಷಾ, ಮಂತ್ರದೀಕ್ಷೆ, ಕ್ರಿಯಾದೀಕ್ಷೆಯನ್ನು ಕೊಟ್ಟು ಅನುಗ್ರಹಿಸುತ್ತಾನೆ. ಇಂತಹ ಮೋಕ್ಷದ ಪಥವನ್ನು ತೋರಿಸಿರುವುದರಿಂದಲೇ ಇಂದು ದೇಶಾದ್ಯಂತ ಗುರು ಪೂರ್ಣಿಮೆ ಆಚರಿಸಿ ಗುರುಗಳ ಋಣ ತೀರಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಧರ್ಮಣ್ಣ ಮಾಸ್ತರ, ಮಲ್ಲಣ್ಣ ಹಳ್ಳಿಖೇಡ, ಲಕ್ಷ್ಮೀಬಾಯಿ ಪಾಂಡ್ರೆ, ಶ್ರೀದೇವಿ ಉಜಳಂಬೆ, ಗುಣವಂತಿ ಮಿಠಾರೆ, ಚಂದ್ರಕಲಾಸ್ವಾಮಿ, ಸರಸ್ವತಿ ಉದಗೀರ ಮತ್ತಿತರರು ಉಪಸ್ಥಿತರಿದ್ದರು. ಶಂಕ್ರಪ್ಪ ಶಿರವಾಳ ಧ್ವಜಾರೋಹಣಗೈದರೆ, ಬಸವರಾಜ ಸ್ವಾಗತಿಸಿದರು. ಟಿ. ಭಜಂತ್ರಿ ನಿರೂಪಿಸಿ, ಜಯಶ್ರೀ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com