ಗುಲ್ಬರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರಸಕ್ತ ಸಾಲಿಗೆ ಉದ್ಯೋಗಿನಿ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ನಿರುದ್ಯೋಗಿ ಮಹಿಳೆಯರು ವಿವಿಧ ಆದಾಯೋತ್ಪನ್ನ ಚಟುವಟಿಕೆ ಹಾಗೂ ಸೇವಾ ಚಟುವಟಿಕೆ ಕೈಗೊಳ್ಳಲು ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಅರ್ಜಿದಾರರ ವಯಸ್ಸು 18 ರಿಂದ 45ರೊಳಗಿರಬೇಕು. ಆದಾಯ ಮಿತಿ 40,000 ಮೀರಿರಬಾರದು. ಇವರಲ್ಲಿ ಸಂಕಷ್ಟ ಪರಿಸ್ಥಿತಿ, ವಿಕಲಚೇತನ, ವಿಧವಾ ಮಹಿಳೆಯರಿಗೆ ಆದಾಯ ಮಿತಿ ಇಲ್ಲ. ಸೌಲಭ್ಯ ಪಡೆಯಲು ಚಟುವಟಿಕೆಯಲ್ಲಿ ಸಾಕಷ್ಟು ಜ್ಞಾನ ಮತ್ತು ಅನುಭವ ಹೊಂದಿರಬೇಕು. ಇಲಾಖೆ ಹಾಗೂ ಇತರ ತರಬೇತಿ ಯೋಜನೆಗಳಡಿ ತರಬೇತಿ ಪಡೆದ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ವಿಧವೆಯರು, ಸಂಕಷ್ಟಿತ ಮಹಿಳೆಯರು, ವಿಕಲಚೇತನರು, ದೇವದಾಸಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರುವವರು ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಯೋಜನೆಯಡಿ ಸೌಲಭ್ಯ ಪಡೆಯಲಿಚ್ಚಿಸುವ ಮಹಿಳೆಯರು ಮೇಲ್ಕಂಡ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಆಗಸ್ಟ್ 5ರೊಳಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಲು ಕೋರಲಾಗಿದೆ.