ಹುಮನಾಬಾದ್: ತಾಲೂಕಿನ ತಾಳಮಡಗಿಯಲ್ಲಿ ಆರ್ಬಿಟ್ ಸಂಸ್ಥೆಯಿಂದ ಮಹಿಳಾ ಅಭಿವೃದ್ಧಿ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರದಲ್ಲಿ ವನಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
ಆಲ್ಬರ್ಟ್ ಕ್ರಾಸ್ತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸೋಮಶೇಖರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ವನಮಹೋತ್ಸವ ಆಚರಣೆಯ ಕುರಿತು ವಿವರಿಸಿ ಪ್ರತಿಯೊಬ್ಬರೂ ಮನೆಯಲ್ಲಿ ಒಂದೆರಡು ಮರಗಿಡಗಳನ್ನು ಬೆಳೆಸಬೇಕೆಂದು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ನಿಮಿತ್ತ ಪ್ರತಿಯೊಬ್ಬ ಸಂಘದ ಮಹಿಳೆಯರಿಗೆ ಉಚಿತವಾಗಿ ಸಂಸ್ಥೆಯ ವತಿಯಿಂದ ಗಿಡ ಮರದ ಸಸಿಯನ್ನು ಹಂಚಲಾಯಿತು. ಮಹಿಳಾ ಅಭಿವೃದ್ಧಿ ಕೇಂದ್ರ ಸಂಯೋಜಕ ಪೇತ್ರು, ಸ್ಥಳಿಯ ಸಂಯೋಜಕರಾದ ಕಾರ್ಮಲಿನ್, ಸವಿತಾ, ಅಮಿತಾ ಮತ್ತು ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.