ಹುಮನಾಬಾದ್: ಸದಾ ಜನ ಜಂಗುಳಿಯಿಂದ ಕೂಡಿರುವ ಜೆಸ್ಕಾಂ ಕಚೇರಿಯ ಚಾವಣಿ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಜೆಸ್ಕಾಂ ಕಚೇರಿ ಚಾವಣಿ ಸಂಜೆ 5.15 ಸಂಭವಿಸಿದ ಕಾರಣ ಹೆಚ್ಚಿನ ಸಿಬ್ಬಂದಿ ಕಚೇರಿಯಲ್ಲಿ ಇರಲಿಲ್ಲ. ಹಾಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ
ಜೆಸ್ಕಾಂ ಕಚೇರಿ ಸಂಪೂರ್ಣ ಗಣಕೀಕೃತಗೊಂಡಿರುವ ಕಾರಣ ಕಂಪ್ಯೂಟರ್ಗಳು ಹಾಗೂ ಕೆಲವೊಂದು ದಾಖಲೆಗಳು ನಾಶವಾಗಿರುವ ಬಗ್ಗೆ ತಿಳಿದು ಬಂದಿದೆ.
ಜೆಸ್ಕಾಂ ಕಚೇರಿಯಲ್ಲಿ ಸುಮಾರು 25ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಎಂದಿನಂತೆ ಕಚೇರಿ ಕೆಲಸಗಳು ಪ್ರಾರಂಭವಾಗಲು 2-3 ದಿನ ಬೇಕಾಗುತ್ತದೆ. ಕೊಠಡಿಯ ಒಂದು ಭಾಗದ ಗೋಡೆ ಬಿರುಕು ಬಿಟ್ಟಿದರಿಂದ ದುರಸ್ತಿ ಮತ್ತು ಇನ್ನೊಂದು ಗೋಡೆಯ ನಿರ್ಮಾಣದ ಕಾರ್ಯ ನಡೆಯುತ್ತಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕ್ ಪವಾರ ತಿಳಿಸಿದ್ದಾರೆ.