ಹುಮನಾಬಾದ್: ತಾಲೂಕು ಮಟ್ಟದ ನ್ಯಾಯಲಯಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಕರ್ನಾಟಕ ಉಚ್ಚ ನ್ಯಾಯಲಯ ನ್ಯಾ. ಎನ್.ಕೆ.ಪಾಟೀಲ್ ತಿಳಿಸಿದರು. ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ವಿವಿಧ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ತಾಲೂಕು ಮಟ್ಟದ ನ್ಯಾಯಲಯಗಳ ಬೇಡಿಕೆಗಳನ್ನು ಹಂತ ಹಂತವಾಗಿ ಪೊರೈಸಲಾಗುವುದು ಎಂದು ತಿಳಿಸಿದರು. ನ್ಯಾ. ಬಿ. ಶ್ರೀನಿವಾಸಗೌಡ, ಸಂಸದ ಭಗವಂತ ಖೂಬಾ, ಶಾಸಕ ರಾಜಶೇಖರ ಪಾಟೀಲ್, ಜಿಲ್ಲಾ ನ್ಯಾಯಧೀಶ ಹಂಚಟೆ ಸಂಜುಕುಮಾರ, ಸ್ಥಳಿಯ ನ್ಯಾಯಧೀಶರಾದ ಎಸ್.ಎನ್. ಜಾಲವಾದಿ, ಚಂಪರಾಜ, ಪದ್ಮಾಕಾರ, ಮಾಜಿ ಶಾಸಕ ಸುಭಾಷ ಕಲ್ಲೂರ, ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ವೀರಣ್ಣಾ ಪಾಟೀಲ್, ತಾಪಂ ಅಧ್ಯಕ್ಷ ಜಗನ್ನಾಥರೆಡ್ಡಿ, ಪುರಸಭೆ ಅಧ್ಯಕ್ಷ ವಿನಾಯಕ್ ಯಾದವ್, ಲಕ್ಷ್ಮನ ಬುಳ್ಳಾ, ಅಫಸರ್ಮಿಯ್ಯಾ ಸೇರಿದಂತೆ ಬಾರ್ ಅಸೋಸಿಯೇಷನ್ ಪದಾಧಿಕಾರಿಗಳು ನ್ಯಾಯವಾದಿಗಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉದಯಕುಮಾರ ಶೀಲವಂತ ಸ್ವಾಗತಿಸಿದರು.