ವನಮಹೋತ್ಸವಕ್ಕೆ ಚಾಲನೆ

Updated on: 

ಹುಮನಾಬಾದ್: ತಾಲೂಕಿನ ಇಟಗಾ ಗ್ರಾಮದಲ್ಲಿ ನಡೆದ ವನಮಹೋತ್ಸವಕ್ಕೆ ತಾಪಂ ಇಒ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ತಾಲೂಕು ಕಾನೂನು ಸೇವಾ ಸಮಿತಿ, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಆಶ್ರಯದಲ್ಲಿ ಲಕ್ಷ-ವೃಕ್ಷ ಅಭಿಯಾನ ಪ್ರಾರಂಭಿಸಲಾಯಿತು. ಇಟಗಾ ಗ್ರಾಮದ ಸುತ್ತಮುತ್ತ ಅರಣ್ಯ ಪ್ರದೇಶದ 50 ಎಕರೆ ಜಮೀನಿನಲ್ಲಿ ವಿವಿಧ ತಳಿಯ ಸಸಿಗಳನ್ನುನೆಡುವ ಮೂಲಕ ಗಿಡಮರಗಳು ಹೆಚ್ಚಿಸಲು ಈ ಅಭಿಯಾನ ಜಾರಿಯಲ್ಲಿದೆ ಎಂದು ನಾಗಪ್ಪ ತಿಳಿಸಿದರು. ವಲಯ ಸಹಾಯಕ ಅರಣ್ಯ ಅಧಿಕಾರಿ ಕೆ.ಡಿ. ಶ್ರೀನಿವಾಸ ಮಾತನಾಡಿ, ಅರಣ್ಯ ಪ್ರದೇಶವು ಗಿಡ ಮರಗಳಿಂದ ಕೂಡಿರಬೇಕು. ಜೊತೆಗೆ ಪ್ರಾಣಿ ಪಕ್ಷಿಗಳು ಹೆಚ್ಚಾಗಿ ಓಡಾಡಬೇಕು. ಇದರಿಂದ ಪರಿಸರ ಸುಚಿತ್ವ ಕಾಪಾಡಿಕೊಳ್ಳುವುದರ ಜೊತೆಗೆ ಉತ್ತಮ ಮಳೆ ಬರಲು ಸಾಧ್ಯವಾಗುತ್ತದೆ ಎಂದರು. ಜಿಪಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಮಲ್ಲಿಕಾರ್ಜುನ ಮೋಳಕೇರಿ, ಅರಣ್ಯ ಇಲಾಖೆ ಮಹಾದೇವಯ್ಯಾ, ಸಂತೋಶ ಸೇರಿದಂತೆ ಮತ್ತಿತರರು ಉಪಸ್ಥಿತರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com