'ಕಲೆಗೆ ತನ್ನದೇ ವಿಶಿಷ್ಟ ಶಕ್ತಿಯಿದೆ'

Updated on: 

ಬೀದರ್: ಕಲೆಗೆ ಒಂದು ವಿಶಿಷ್ಟವಾದ ಶಕ್ತಿಯಿದೆ. ಅಂತಹ ಶಕ್ತಿಯನ್ನು ಜಿಲ್ಲೆಯ ಮಕ್ಕಳಲ್ಲಿ ತುಂಬುತ್ತಿರುವ ರಾಣಿ ಸತ್ಯಮೂರ್ತಿ ಮಕ್ಕಳಲ್ಲಿ ಭರತನಾಟ್ಯದ ಕಲೆಯನ್ನು ಅರಳಿಸಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ನುಡಿದರು.
ನಗರದ ನಗರದ ಅರುಣೋದಯ ಪ್ರೌಢಶಾಲೆಯಲ್ಲಿ ನಾಟ್ಯಶ್ರೀ ನೃತ್ಯಾಲಯದ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯದ ಮಹತ್ವ ಮತ್ತು ಭರತನಾಟ್ಯ ಒಂದು ಬಹುಉಪಯೋಗಿ ಕಲೆ ವಿಷಯ ಕುರಿತು ಅಂತರ ಶಾಲಾ ಕಾಲೇಜು ಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ರಾಣಿ ಸತ್ಯಮೂರ್ತಿ ಮಾತನಾಡಿ, ಬೀದರ್ ನಾಗರಿಕರ ಪ್ರೀತಿ ವಿಶ್ವಾಸಗಳಿಂದ ನೃತ್ಯಕಲೆ ನಮ್ಮೆಲ್ಲರನ್ನು ಒಂದು ಮಾಡಿದೆ. ಎಲ್ಲರ ಸಹಕಾರದಿಂದ ನೃತ್ಯಾಲಯ ದಶಮಾನೋತ್ಸವದ ಹೊಸ್ತಿಲಲ್ಲಿ ನಿಂತಿದ್ದೇವೆ. ಇದಕ್ಕೆ ನೃತ್ಯಕಲೆಯಲ್ಲಿ ಮಕ್ಕಳು ಮಾಡಿದ ಸಾಧನೆಯಾಗಿದೆ ಎಂದರು.
ಋಷಿಕೇಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕುಶಲರಾವ್ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾಷಣ ಸ್ಪರ್ಧೆಯ ನಿರ್ಣಾಯಕರಾಗಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ. ಅಡಕಿ, ಅಂಬೇಡ್ಕರ್ ತತ್ವ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಂಗಶೆಟ್ಟಿ ಖಾನಪೂರ, ಮಂಗಲಾ ಭಾಗವತ ಹಾಗೂ ಕೆ. ಸತ್ಯಮೂರ್ತಿ ಮತ್ತು ಮುಖ್ಯಗುರು ಮಲ್ಲಿಕಾರ್ಜುನ ಬಂಬಳಗೆ ಉಪಸ್ಥಿತರಿದ್ದರು.
ಪ್ರತಿಭಾ ಚಾಮಾ ಸ್ವಾಗತಿಸಿದರೆ, ಸಂತೋಷ ಮಂಗಳೂರೆ ನಿರೂಪಿಸಿದರು. ಗೀತಾ ಪಾಪಡೆ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com