ಶಾಸಕ ಪಾಟೀಲ್ಗೆ ಸಚಿವ ಸ್ಥಾನ ನೀಡಿ

Updated on: 

ಹುಮನಾಬಾದ್: ಶಾಸಕ ರಾಜಶೇಖರ ಪಾಟೀಲ್ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ತಾಲೂಕಿನ ಮನ್ನಾ ಏಖೆಳ್ಳಿ ಗ್ರಾಮದಲ್ಲಿ ಸೋಮವಾರ ರಾಜ್ಯ ವಿಕಲಚೇತನರ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ ಹುಣಸಗೇರಾ, ಗ್ರಾಪಂ ಸದಸ್ಯ ಸಂತೋಷ ಹಳ್ಳಿಖೇಡ ನೇತೃತ್ವದಲ್ಲಿ ಗ್ರಾಮದ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ ನಡೆಸಿ ಸಿಎಂ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ಕಂದಾಯ ಅಧಿಕಾರಿಗೆ ಸಲ್ಲಿಸಿದರು.
ಗಡಿ ಜಿಲ್ಲೆಯ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸರ್ಕಾರ ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು. ಮೂರು ಬಾರಿ ಶಾಸಕರಾಗುವ ಮೂಲಕ ಹಲವು ಜನಪರ ಕಾರ್ಯಗಳನ್ನು ಶಾಸಕ ಪಾಟೀಲ್ ಮಾಡುತ್ತಿದ್ದು, ಸಚಿವ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ತಾಪಂ ಸದಸ್ಯ ಮಹ್ಮದ್ ನೂರೋದ್ದಿನ್, ಗ್ರಾಪಂ ಸದಸ್ಯರಾದ ಸುಭಾಷ್ ಅಲ್ಲರೆಡ್ಡಿ, ಮರೆಮ್ಮ, ನರಸಿಂಗ್, ಗುಂಡಮ್ಮ, ಮೀರಾಜ್, ನಿಜಾಮೋದ್ದಿನ್, ಅಂಗವಿಕಲ ಸಂಘದ ಪ್ರಮುಖರಾದ ಬಸವರಾಜ ಬಸೀಲಾಪೂರ, ಜಗನ್ನಾಥ ಕರಕನಳ್ಳಿ, ಶಾಂತಕುಮಾರ ಸಿತಾಳಗೇರಾ, ಪಾರ್ವತಿ ನಂದಗಾಂವ್, ಸುರೇಖಾ ಕಂದಗೂಳ, ಗಂಗರಾಮ ಕಬೀರಬಾದ್, ಪ್ರಭು ಡಾಕುಳಗಿ, ಪ್ರಮುಖರಾದ ಬಾಬು ಪೀರಸಾಬ್, ಸಂಗಪ್ಪ ಮಂದಾ, ಅರವಿಂದ ಹಳ್ಳಿಖೇಡ, ಪ್ರಭು ವಾರದ, ಮಾರುತಿ ವಗ್ಗೆರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com