ಸರ್ಕಾರಿ ಸೇವೆ ಸದ್ಬಳಕೆಯಾಗಲಿ

Updated on: 

ನಗರದ ಸರ್ಕಾರಿ ಐಟಿಐನಲ್ಲಿ ಗುರುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮ ಒಳ್ಳೆಯತನವೇ ನಮಗೆ ಆಶೀರ್ವಾದ. ಸಂಬಂಧಗಳಿಗೆ ಪೂರ್ವಜನ್ಮದ ನಂಟಿರುತ್ತದೆ. ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು, ಎಲ್ಲಿಯೋ ನೌಕರಿ ಮಾಡುವುದು ನಮ್ಮೆಲ್ಲರ ಭಾಗ್ಯ. ಸಿಕ್ಕ ಅವಧಿಯಲ್ಲಿ ಶಕ್ತಿ ಮೀರಿ ದುಡಿಯಬೇಕು. ಸರ್ಕಾರಿ ನೌಕರರು ಎಷ್ಟು ವರ್ಷ ಸೇವೆ ಸಲ್ಲಿಸಿದ್ದೇವೆ ಎಂಬುದು ಮುಖ್ಯವಲ್ಲ. ಸೇವೆಯಲ್ಲಿದ್ದಾಗ ನಾವೇನು ಸಾಧನೆ ಮಾಡಿದ್ದೇವೆ ಎಂಬುದೇ ಮುಖ್ಯ ಎಂದರು.
ಸೇವಾನಿವೃತ್ತಿಯಾದ ಆಡಳಿತಾಧಿಕಾರಿ ಎಚ್. ಕರಿಬಸಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಭಾರಿ ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿದರು. ಸಿದ್ದಾಪುರ ಐಟಿಐ ಪ್ರಾಚಾರ್ಯ ಮಂಜುನಾಥ ಹೆಗ್ಗಡೆ, ಹುಬ್ಬಳ್ಳಿ ಐಟಿಐನ ಐ.ಎ. ವಿರಕ್ತಮಠ ತಮ್ಮ ಅನುಭವ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಉರ್ದು ಅಕಾಡೆಮಿ ಸದಸ್ಯ ಹಾಗೂ ಕಾಲೇಜಿನ ಪೂರ್ವ ವಿದ್ಯಾರ್ಥಿಯಾದ ಯುಸೂಫ್ ರಹೀಮ್ ಬಿದ್ರಿ ಅವರನ್ನು ಸನ್ಮಾನಿಸಲಾಯಿತು.
ಕಚೇರಿ ಅಧಿಕ್ಷಕ ಪ್ರಕಾಶ ಜನವಾಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಬಾಬು ಪ್ರಭಾಜಿ ಸ್ವಾಗತಿಸಿ ನಿರೂಪಿಸಿದರು. ಯುಸೂಫಮಿಯ್ಯ ಜೋಜನಾ ವಂದಿಸಿದರು. ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಐಟಿಐ ಕಾಲೇಜಿನ ಪ್ರಮುಖರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com