ಬಿಜಾಪುರ: ಜಿಲ್ಲೆಯಲ್ಲಿ ಬುಧವಾರ ಸಂಜೆ ಬಿಜಾಪುರ ನಗರ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು, ಸಿಂದಗಿ ತಾಲೂಕಿನ ಕೆರೂಟಗಿ ತಾಂಡಾದಲ್ಲಿ ಸಿಡಿಲು ಬಡಿದು ಒಬ್ಬ ಬಾಲಕ ಮೃತಪಟ್ಟು ಇತರ ಮೂವರು ಗಾಯಗೊಂಡಿದ್ದಾರೆ. ಕೆರೂಟಗಿ ತಾಂಡಾದ ಪ್ರತಾಪ ಬಾಬು ಚವ್ಹಾಣ (15) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಸಿಡಿಲಿಗೆ ಗಾಯಗೊಂಡ ಬಾಬು ಚಹ್ವಾಣ (50), ನೀಲಾ (16), ಮಾಲಾಶ್ರೀ (14) ಅವರನ್ನು ಕಲಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಜಾಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಅಲ್ಲದೆ ಚಿಕ್ಕಮಗಳೂರು ನಗರದಲ್ಲಿ ಮಳೆಯಾದ ವರದಿಯಾಗಿದೆ.
Advertisement