ಆದಿಶ್ರೀಗೆ ಶ್ರದ್ಧಾಂಜಲಿ

Updated on: 

ಗುಂಡ್ಲುಪೇಟೆ: ಆದಿಚುಂಚನಗಿರಿ ಮಠದ ಮುಖ್ಯಸ್ಥರಾಗಿ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅಧಿಕಾರ ವಹಿಸಿಕೊಂಡ ನಂತರ ಒಕ್ಕಲಿಗರಿಗೆ ತಿರುವು ಸಿಕ್ಕಿತು ಎಂದು ಜನಪದ ತಜ್ಞ ಡಾ. ಪಿ.ಕೆ.ರಾಜಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಮದ್ದಾನೇಶ್ವರ ಶಾಲೆ ಆವರಣದಲ್ಲಿ ತಾಲೂಕು ಒಕ್ಕಲಿಗರ ಸಂಘ ಆಯೋಜಿಸಿದ್ದ ಆದಿಶ್ರೀಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಗುರುಗಳು ಆದಿಶ್ರೀಗಳಾಗಿ ಪಟ್ಟಕ್ಕೆ ಬಂದಾಗ ಮಠ ಭಾರಿ ಸಂಕಷ್ಟದಲ್ಲಿತ್ತು. ಒಂದು ತುತ್ತಿಗೂ ತೊಂದರೆಯಲ್ಲಿತ್ತು. ನಂತರ ಮಠ ಕಟ್ಟಲು ಶ್ರೀಗಳು ಜನರ ಬಳಿಗೆ ಹೋಗಿ ಹಣ ಸಂಗ್ರಹಿಸಿದ ಬಗ್ಗೆ ಸವಿವರವಾಗಿ ತಿಳಿಸಿದರು.
ಶಿಕ್ಷಣ, ಆರೋಗ್ಯ, ದಾಸೋಹ, ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಆಪಾರ ಪ್ರೀತಿ ಹೊಂದಿದ್ದ ಶ್ರೀಗಳು, ದಲಿತರು, ಲಿಂಗಾಯಿತರು, ಮುಸ್ಲಿಂನ ಯುವಕರಿಗೆ ವೇದಮಂತ್ರ ಕಲಿಸಿ ಪೂಜಾರಿ ಮಾಡಿದ ಮಾಹಾನ್ ಸಂತರು ಎಂದರು.
ಆದಿಚುಂಚನಗಿರಿ ಮಠ ಜ್ಯಾತ್ಯಾತೀತವಾಗಿತ್ತು. ಅರ್ಹತೆ ಇದ್ದರೆ ದಲಿತರನ್ನು ಮಠಾಧೀಶರನ್ನಾಗಿ ಮಾಡುವ ಯೋಚನೆ ಶ್ರೀಗಳಲ್ಲಿತ್ತು. ಕಗ್ಗಾಡಿನಂತಿದ್ದ ಆದಿ ಚುಂಚನಗಿರಿಯನ್ನು ಇಡಿ ವಿಶ್ವ ತಿರುಗಿ ನೋಡುವ ರೀತಿಯಲ್ಲಿ ಮಾಡಿದ ದಿವ್ಯ ಶಕ್ತಿ ಅವರಲ್ಲಿತ್ತು ಎಂದರು.
ಶಾಸಕ ಎಚ್.ಎಸ್.ಮಹದೇವಪ್ರಸಾದ್ ಮಾತನಾಡಿ, ಆದಿಶ್ರೀಗಳ ಆತ್ಮಕ್ಕೆ ಶಾಂತಿಯಾಗಬೇಕಾದರೆ ಅವರ ಕಲ್ಪನೆಯ ಹಸಿರು ಕ್ರಾಂತಿಯಡಿಯಲ್ಲಿ ಸಸಿಗಳನ್ನು ನೆಡಿ. ಜನರ ಬಳಿ ದೇಣಿಗೆ ಸಂಗ್ರಹಿಸಿ ಕೇವಲ 20 ವರ್ಷಗಳಲ್ಲಿ  ಮಠವನ್ನ ಹಂತಹಂತವಾಗಿ ಮೇಲೆತ್ತಿದರು. ಒಕ್ಕಲಿಗರಿಗೆ ಧಾರ್ಮಿಕ ಪರಂಪರೆ ಕಲಿಸಿದರು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕೆಜೆಪಿ ಮುಖಂಡ ಸಿ.ಎಸ್. ನಿರಂಜನ್ ಕುಮಾರ್, ಜೆಡಿಎಸ್ ಅಧ್ಯಕ್ಷ ಎಚ್.ಎಂ ಮಹೇಶ್, ಪುರಸಭಾ ಮಾಜಿ ಅಧ್ಯಕ್ಷ ಎಂ. ಪುಟ್ಟರಂಗನಾಯ್ಕ, ಮೌಲ ಮಹಮ್ಮದ್ ಸಿರಾಜ್ ಭಕ್ಷಿ ಮಾತನಾಡಿದರು.
ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ, ವಿರಕ್ತ ಮಠಾಧೀಶ ಕಿರಿಯ ಸ್ವಾಮೀಜಿ, ಶಿಲಾಮಠದ ಸಿದ್ದಮಲ್ಲಪ್ಪ ಸ್ವಾಮೀಜಿ, ಶಿವಪೂಜೆ ಮಠದ ಚನ್ನವೀರ ಸ್ವಾಮೀಜಿ, ಹಳ್ಳದ ಮಠದ ಜಡೇ ಸ್ವಾಮೀಜಿ ಆಶೀರ್ವಚನ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com