ಮೈಸೂರು: ಎಸ್ಬಿಐ ಮತ್ತು ಅದರ ಅಧೀನ ಬ್ಯಾಂಕುಗಳಲ್ಲಿ ಪ್ರೊಬೇಷನರಿ ಅಧಿಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 2013 ಜ. 1ರೊಳಗೆ ಯಾವುದಾದರೂ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಕನಿಷ್ಠ 30 ವರ್ಷ ವಯೋವುತಿ ಇರಬೇಕು. ಪ.ಜಾತಿ ಪಂಗಡ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯೋವುತಿಯಲ್ಲಿ ನಿಯಮದಲ್ಲಿ ಸಡಿಲಿಕೆ ಇದೆ. www.statebankofindia.com ಆನ್ಲೈನ್ ಮೂಲಕ ಫೆ. 23ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ವೆಬ್ಸೈಟ್ ವಿಳಾಸ ಅಥವಾ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ ಮೈಸೂರು ಕಚೇರಿಯನ್ನು ಹಾಗೂ ದೂ. 0821-2516844 ಅಥವಾ ಮೊ. 8892019297 ಸಂಪರ್ಕಿಸಬಹುದು.
ಡ್ರೈವರ್ ಕಂ ಮೆಕ್ಯಾನಿಕ್ ತರಬೇತಿ
ಮೈಸೂರು: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಡ್ರೈವರ್, ಮೆಕ್ಯಾನಿಕ್, ಆಟೋ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹುದ್ದೆಗೆ 6 ತಿಂಗಳ ಅವಧಿಯ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಫೆ. 28ರ ಸಂಜೆ 5.30 ರೊಳಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಎನ್.ಆರ್. ಮೊಹಲ್ಲಾ, ಮೈಸೂರು-07 ಇಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಪ್ರವೇಶ ಸಂದರ್ಶನ ಮಾ. 4ರಂದು ನಡೆಯಲಿದೆ. ಅಗತ್ಯ ದಾಖಲಾತಿ ಮತ್ತು ಪ್ರವೇಶ ಶುಲ್ಕ 1200 ಗಳೊಂದಿಗೆ ಹಾಜರಾಗಿ ಪ್ರವೇಶ ಪಡೆಯಬಹುದು. ಡ್ರೈವರ್ ಮತ್ತು ಮೆಕ್ಯಾನಿಕ್ ವೃತ್ತಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ 18 ವರ್ಷ ತುಂಬಿರಬೇಕು.