ಕೊಳ್ಳೇಗಾಲ: ಸಮಗ್ರ ವಚನ ಸಂಪುಟವನ್ನು ಮರು ಪ್ರಕಟಿಸುವಂತೆ ರಾಷ್ರೀಯ ಬಸವದಳ ಕೊಳ್ಳೇಗಾಲ ತಾಲೂಕು ಘಟಕದ ಕಾರ್ಯಾಧ್ಯಕ್ಷ ಸು.ಮಲ್ಲಿಕಾರ್ಜುನಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಪತ್ರ ಬರೆದಿರುವ ಅವರು, ಸರ್ಕಾರ 1993ರಲ್ಲಿ 15ಪುಟಗಳ ವಚನ ಸಂಪುಟವನ್ನು ಪ್ರಕಟಿಸಿತ್ತು. 2001ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ದ್ವಿತೀಯ ದರ್ಜೆ ಆವೃತ್ತಿಯನ್ನು ಪ್ರಕಟಿಸಿತ್ತು. ನಂತರ ಬಂದ ಸರ್ಕಾರಗಳು ವಚನ ಸಾಹಿತ್ಯ ಪ್ರಕಟಣೆಗೆ ಗಮನಹರಿಸಿಲ್ಲ. ಮುಂದಿನ ದಿನಗಳಲ್ಲಿ ವಚನ ಸಂಪುಟವನ್ನು ಮರು ಪ್ರಕಟಿಸುವ ಮೂಲಕ ಸಾರ್ವಜನಿಕ ಗ್ರಂಥಾಲಯ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ವಿವಿ ಮತ್ತು ಎಲ್ಲ ವರ್ಗದ ಜನತೆಗೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.