ಮೈಸೂರು: ಪ್ರೀತಿಸಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ಇಲ್ಲಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿ.ಕೆ. ಬಡಾವಣೆಯ ನಿವಾಸಿ ಶೇಖರ್ (24) ಆರೋಪಿ. ಈತ ಬೋಗಾದಿ ವಸಂತನಗರ ನಿವಾಸಿ ಯುವತಿಯನ್ನು ಪ್ರೀತಿಸಿ ನಾಟಕವಾಡಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಆಕೆಯನ್ನು ವಿವಾಹವಾಗಲು ಶೇಖರ್ ನಿರಾಕರಿಸಿದ್ದ. ಈ ಸಂಬಂಧ ಯುವತಿ ನೀಡಿರುವ ದೂರಿನ್ವಯ ಸರಸ್ವತಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.