ಆದಿವಾಸಿಗಳಿಗಾಗಿ 1360 ಕೋಟಿ ಮೀಸಲು: ಒತ್ತಾಯ

Updated on: 




ಹುಣಸೂರು: ರಾಜ್ಯದ 4 ಲಕ್ಷ ಆದಿವಾಸಿಗಳಿಗೆ 1500 ಹಾಡಿಗಳಲ್ಲಿ ಅಭಿವೃದ್ಧಿ ಕೈಗೊಳ್ಳಲು 2013-14ನೇ ಸಾಲಿನ ಬಜೆಟ್ನಲ್ಲಿ 1360 ಕೋಟಿ ಹಣವನ್ನು ಮೀಸಲಿಡುವಂತೆ ಕರ್ನಾಟಕ ವಿಕಾಸ ವಾಹಿನಿ, ಗಿರಿಜನ ಕ್ರಿಯಾಕೂಟ ಹಾಗೂ ರಾಜ್ಯ ಮೂಲ ನಿವಾಸಿಗಳ ವೇದಿಕೆಗಳು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಲ್ಲಿ ಮನವಿ ಮಾಡಿವೆ.
ರಾಮನಗರ, ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳಿಗೆ ನೆರವಾಗಬೇಕಿದೆ. ಅರಣ್ಯ ಹಕ್ಕುಗಳ ಹಾಡಿ ಸಮಿತಿ ಬಲಪಡಿಸಿ ಹಾಡಿಗಳ ಎಲ್ಲೆಗಳ ಅರಣ್ಯಗಳನ್ನು ಅಭಿವೃದ್ಧಿಪಡಿಸಲು 30 ಕೋಟಿ, ಅರಣ್ಯಭೂಮಿ ಮರಾದಾರಿ ತಕ್ಕಡಿನ 70 ಸಾವಿರ ಕುಟುಂಬಗಳಿಗೆ ತಲಾ 20 ಸಾವಿರ ಹಾಡಿಗಳಿಗೆ ನಾಗರಿಕ ಸೌಕರ್ಯ ಒದಗಿಸಲು ತಲಾ 30 ಲಕ್ಷ ನಿಗದಿಪಡಿಸಿ 1500 ಹಾಡಿಗಳಿಗೆ 500 ಕೋಟಿ ಮೀಸಲಿಡಬೇಕು.
ಮಕ್ಕಳ ಹಾಗೂ ತಾಯಂದಿರ ಆರೋಗ್ಯ ಸುಧಾರಣೆ, ಪೌಷ್ಟಿಕ ಆಹಾರ, ಶಿಶು ಪಾಲನೆಗೆ 200 ಕೋಟಿ, ಮನೆಗಳಲ್ಲಿ ತರಕಾರಿ ಬೆಳೆಸಲು, ತೋಟಗಾರಿಕೆ ಹೆಚ್ಚಿಸಲು ನೆರವು ನೀಡುವುದು, ಆಶ್ರಮ ಶಾಲೆಗಳು, ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ 200 ಆಶ್ರಮ ಶಾಲೆಗಳನ್ನು ಸ್ಥಾಪಿಸುವುದು, ಆದಿವಾಸಿಗಳ ಕೃಷಿ ಅಭಿವೃದ್ಧಿಗೆ 300 ಕೋಟಿ ಅನುದಾನ ನೀಡುವಂತೆ ಗಿರಿಜನ ಕ್ರಿಯಾ ಕೂಟ ಹಾಗೂ ಡೀಡ್ ಸಂಸ್ಥೆಯ ಶ್ರೀಕಾಂತ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com