ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾದ ಜೋಡಿಗಳಲ್ಲಿ ಎರಡು ಜೋಡಿಗಳು ವಿಶೇಷವಾಗಿ ಗಮನ ಸೆಳೆಯಿತು. ಎಚ್.ಡಿ.ಕೋಟೆ ತಾಲೂಕಿನ ಜಿಯರ ಕಾಲೋನಿಯ ಶಂಭಯ್ಯ ಎಂಬವರ ಪುತ್ರಿ ಎಸ್.ಮಣಿಯಮ್ಮ ಹಾಗೂ ಕನಕಪುರ ತಾಲೂಕಿನ ದೊಡ್ಡಯ್ಯನಕೆರೆ ಗ್ರಾಮದ ರಾಜಯ್ಯ ಎಂಬವರ ಪುತ್ರ ಬ್ಯಾಂಕ್ ಉದ್ಯೋಗಿ ಬೋರಯ್ಯ ಈ ಇಬ್ಬರು ಅಂಧರು. ದೈಹಿಕ ಅಂಗವಿಕಲತೆಯನ್ನು ಮರೆತು ಬದುಕಿನಲ್ಲಿ ದಂಪತಿಯಾಗಿ ಪರಸ್ಪರ ಬೆಳಕಾದವರು.
ಅಂತೆಯೇ ಕೊಳ್ಳೇಗಾಲದ ಸತ್ತೇಗಾಲದ ಕಲ್ಲಾರೆ ನಂಜಯ್ಯ ಎಂಬವರ ಪುತ್ರ ಮಧುಸೂದನ್ ಸಹ ಅಂಧ. ಇತನನ್ನು ಟಿ. ನರಸೀಪುರದ ಬಣವೆ ಬಕ್ರಮಾದಯ್ಯ ಎಂಬವರ ಪುತ್ರಿ ಲಲಿತಾ ಚಂದ್ರಕಾಂತ ವಿವಾಹವಾದರು. ದೃಷ್ಟಿ ಇಲ್ಲದಿದ್ದರೇನಂತೆ ನಿನ್ನ ಬಾಳಿಗೆ ನಾನು ಕಣ್ಣಾಗುವೆ ಎಂದು ಅಂಗವಿಕಲನ ಬಾಳಿಗೆ ಊರುಗೋಲಾದ ಈ ಯುವತಿಯ ಔದಾರ್ಯವು ಪ್ರಶಂಸನೀಯ.