ಚಾಮರಾಜನಗರ: ನವೋದಯ ಶಾಲೆ ಪ್ರವೇಶಕ್ಕಾಗಿ ಐದನೇ ತರಗತಿ ವಿದ್ಯಾರ್ಥಿಗಳಿಗೆ ಭಾನುವಾರ ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಯಿತು.
ಜಿಲ್ಲೆಯಿಂದ 3089 ವಿದ್ಯಾರ್ಥಿಗಳು ಪ್ರವೇಶ ಬಯಸಿದ್ದಾರೆ. ತಾಲೂಕಿನಲ್ಲಿ ಪಪೂ ಬಾಲಕರ ಹಾಗೂ ಬಾಲಕಿಯ ಕಾಲೇಜು, ಸಿ.ಆರ್. ಬಾಲರಪಟ್ಟಣ ಪ್ರೌಢಶಾಲೆ, ಗುಂಡ್ಲುಪೇಟೆ ತಾಲೂಕಿನಲ್ಲಿ 3 ಕೇಂದ್ರ, ಕೊಳ್ಳೇಗಾಲ ತಾಲೂಕಿವಲ್ಲಿ 2, ಯಳಂದೂರು ಹಾಗೂ ಹನೂರಿನಲ್ಲಿ ತಲಾ ಒಂದು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಪ್ರಾಂಶುಪಾಲ ಡೇನಿಯಲ್ ತಿಳಿಸಿದರು. ಎಲ್ಲಾ ಕೇಂದ್ರಗಳಿಗೂ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ರಾಚಯ್ಯ, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ನಿಂಗೇಗೌಡ ಇದ್ದರು.