ಚಾಮರಾಜನಗರ: ಯಾವುದೇ ಹೊಸ ಯೋಜನೆಗಳಿಲ್ಲದೆ 49.38 ಕೋಟಿ ವೆಚ್ಚದ ನಗರಸಭಾ ಬಜೆಟ್ನ್ನು ನಗರಸಭಾಧ್ಯಕ್ಷೆ ಭಾಗ್ಯಮ್ಮ ಮಂಗಳವಾರ ಮಂಡಿಸಿದರು.
ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಭಾಗ್ಯಮ್ಯ 2013- 14ನೇ ಸಾಲಿನ ಬಜೆಟ್ ಭಾಷಣ ಮಾಡಿದರು.
ನಗರಸಭೆಯ ಅಂತಿಮ ಶುಲ್ಕ 37.57 ಲಕ್ಷ ಸೇರಿದಂತೆ 49.38 ಕೋಟಿ ಈ ಬಾರಿಯ ನೀರಿಕ್ಷಿತ ಆದಾಯ. 49.01 ಕೋಟಿ ವೆಚ್ಚದ ಬಜೆಟ್ ಮಂಡಿಸುವ ಮೂಲಕ ಅಧ್ಯಕ್ಷೆ ಭಾಗ್ಯಮ್ಮ 37.57 ಲಕ್ಷ ಉಳಿತಾಯ ತೋರಿಸಿದ್ದಾರೆ.
ಆದಾಯ: ಈ ನಗರಸಭೆಗೆ ವಿವಿಧ ಬಾಬ್ತುಗಳಿಂದ ಆದಾಯ ನಿರೀಕ್ಷೆ ಮಾಡಲಾಗಿದ್ದು, ಕಟ್ಟಡ ಆಸ್ತಿ ತೆರಿಗೆ ಮೂಲಕ 100 ಲಕ್ಷ, ಆಸ್ತಿ ತೆರಿಗೆ ದಂಡದಿಂದ 10 ಲಕ್ಷ, ಜಾಹೀರಾತು ತೆರಿಗೆಯಿಂದ 2 ಲಕ್ಷ, ಪರಿಷ್ಕೃತ ಉದ್ದಿಮೆ ಪರವಾನಗಿದಾರರಿಂದ 7 ಲಕ್ಷ, ಅಂಗಡಿ ಮಳಿಗೆಗಳ ಬಾಡಿಗೆಯಿಂದ 18 ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ 15 ಲಕ್ಷ, ನಿವೇಶನ ಅಭಿವೃದ್ಧಿ ಶುಲ್ಕದಿಂದ 15 ಲಕ್ಷ, ಮುದ್ರಾಂಕ ಶುಲ್ಕದಿಂದ 5 ಲಕ್ಷ, ಕರ ಸಂಗ್ರಹಣಾ ಶುಲ್ಕದಿಂದ 5 ಲಕ್ಷ, ತರಕಾರಿ ಮಾರುಕಟ್ಟೆ ಮತ್ತು ಶುಲ್ಕದಿಂದ 3.50 ಲಕ್ಷ, ಖಾತೆ ಪ್ರತಿಗಳು ಮತ್ತು ಬದಲಾವಣೆಯಿಂದ 3.50 ಲಕ್ಷ, ಇತರೆ ಪ್ರಮಾಣಪತ್ರಗಳ ಶುಲ್ಕದಿಂದ 2 ಲಕ್ಷ, ಟೆಂಡರ್ ಫಾರಂ ಮಾರಾಟದಿಂದ 1 ಲಕ್ಷ, ಜನನ ಮತ್ತು ಮರಣ ಪ್ರಮಾಣ ಪತ್ರಗಳ ಶುಲ್ಕದಿಂದ 1.50 ಲಕ್ಷ, ಶೌಚಾಲಯ, ಬಸ್ ನಿಲ್ದಾಣದ ಶುಲ್ಕದಿಂದ 10 ಲಕ್ಷ, ರಸ್ತೆ ಅಗೆತ ಶುಲ್ಕದಿಂದ 3.50 ಲಕ್ಷ, ನೀರು ಸರಬರಾಜು ದರ ವಸೂಲಾತಿಯಿಂದ 45 ಲಕ್ಷ, ನೀರಿನ ಠೇವಣಿ ಆದಾಯದಿಂದ 4 ಲಕ್ಷ, ಸಕ್ಕಿಂಗ್ ಮಷಿನ್ ಬಾಡಿಗೆಯಿಂದ 2 ಲಕ್ಷ, ನಗರಸಭೆ ಇತರೆ ಮೂಲಗಳಿಂದ 3.90 ಲಕ್ಷ, ನಗರಸಭೆಯ ಅಧಿಕಾರಿ ಹಾಗೂ ನೌಕರರ ವೇತನಕ್ಕಾಗಿ 340 ಲಕ್ಷ, ಸರ್ಕಾರದ ಎಸ್ಎಫ್ಸಿ ಅಭಿವೃದ್ಧಿ ಅನುದಾನ 441 ಲಕ್ಷ, ಎಸ್ಎಫ್ಸಿ ವಿಶೇಷ ಅನುದಾನ 50 ಲಕ್ಷ, ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನದಿಂದ 3000 ಲಕ್ಷ, 13ನೇ ಹಣಕಾಸು ಅನುದಾನದಿಂದ 136.42 ಲಕ್ಷ, ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಅನುದಾನದಿಂದ 75 ಲಕ್ಷ, ಎಸ್ಎಫ್ಸಿ ವಿದ್ಯುತ್ ಅನುದಾನದಿಂದ 450 ಲಕ್ಷ, ಬರ ಪರಿಹಾರ ಅನುದಾನದಿಂದ 100 ಲಕ್ಷ, ಜನಗಣತಿ ಮತ್ತು ಸರ್ವೆ ಕೆಲಸಕ್ಕಾಗಿ ಇತರೆ ಸರ್ಕಾರಿ ಆದಾಯ ಮೂಲಗಳಿಂದ 50 ಲಕ್ಷ ಸೇರಿದಂತೆ 48.97 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷರು ವಿವರಿಸಿದರು.
ವೆಚ್ಚಗಳು: ಚಾಮರಾಜನಗರ ರಸ್ತೆ, ಫುಟ್ಪಾತ್ ಹಾಗೂ ಚರಂಡಿ ನಿರ್ಮಾಣಕ್ಕಾಗಿ 2042 ಲಕ್ಷ, ಸೋಲಾರ್ ದೀಪಗಳ ಖರೀದಿಗಾಗಿ 20 ಲಕ್ಷ, ಪುಟ್ಪಾತ್ ನಿರ್ಮಾಣಕ್ಕೆ 50 ಲಕ್ಷ, ರಿಂಗ್ರೋಡ್ ನಿರ್ಮಾಣಕ್ಕೆ 950 ಲಕ್ಷ, ಹೈಮಾಸ್ ವಿದ್ಯುತ್ ದೀಪ ಹಾಗೂ ಬೀದಿ ದೀಪಗಳ ಖರೀದಿಗಾಗಿ 20 ಲಕ್ಷ, ವಿದ್ಯುತ್ ಚಿತಾಗಾರ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 150 ಲಕ್ಷ, ವಸತಿಗೃಹ ನಿರ್ಮಾಣಕ್ಕಾಗಿ 95 ಲಕ್ಷ, ರಸ್ತೆ ಮತ್ತು ಚರಂಡಿ ದುರಸ್ತಿಗಾಗಿ 50 ಲಕ್ಷ, ಸ್ಮಶಾನಗಳ ಅಭಿವೃದ್ಧಿಗಾಗಿ 60 ಲಕ್ಷ, ತಂಗುದಾಣಗಳ ನಿರ್ಮಾಕ್ಕಾಗಿ 50 ಲಕ್ಷ, ಬೀದಿ ದೀಪಗಳ ನಿರ್ವಹಣಾ ವೆಚ್ಚಕ್ಕಾಗಿ 20 ಲಕ್ಷ, ಸ್ವಾಗತ ಕಮಾನು ಅಭಿವೃದ್ಧಿಗಾಗಿ 5 ಲಕ್ಷ, ಪಂಪ್ಹೌಸ್ ಯಂತ್ರ ಹಾಗೂ ಸಲಕರಣೆ ಖರೀದಿಗೆ 30 ಲಕ್ಷ, ವಾಲ್ವ್ ಛೇಂಬರ್ ಅಭಿವೃದ್ಧಿಗೆ 23 ಲಕ್ಷ, ಕುಡಿಯುವ ನೀರು ಸಮಸ್ಯೆ ನಿವಾರಿಸಲು 100 ಲಕ್ಷ, ನೀರು ಸರಬರಾಜು ಕಾಮಗಾರಿಗಳ ನಿರ್ವಹಣೆ ಮತ್ತು ಯಂತ್ರೋಪಕರಣಗಳ ದುರಸ್ತಿಗಾಗಿ 60 ಲಕ್ಷ, ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಬಳಕ್ಕೆ 40 ಲಕ್ಷ, ನೀರು ಸರಬರಾಜು ಮತ್ತು ಸಣ್ಣ ನೀರು ಸರಬರಾಜು ಅಳವಡಿಕೆಗಾಗಿ 50 ಲಕ್ಷ, ಕಸಾಯಿಖಾನೆ, ಫಿಶ್ ಮಾರುಕಟ್ಟೆ ನಿರ್ಮಾಣಕ್ಕಾಗಿ 250 ಲಕ್ಷ, ಏರೋಬಿಕ್ ಕಾಂಪೋಸ್ಟ್, ಎರೆಹುಳು, ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ 41.52 ಲಕ್ಷ, ಘನತ್ಯಾಜ್ಯ ವಸ್ತು ವಿಲೇವಾರಿಯ ಸ್ವಚ್ಛತಾ ಕಾರ್ಯ ನಿರ್ವಹಣೆಗಾಗಿ 80 ಲಕ್ಷ, ಉದ್ಯಾನವನಗಳ ನಿರ್ವಹಣೆಗಾಗಿ 11 ಲಕ್ಷ, ಉದ್ಯಾನವನಗಳ ದುರಸ್ತಿ ಮತ್ತು ಅಭಿವೃದ್ಧಿಗಾಗಿ 80 ಲಕ್ಷ, ಗಿಡ ನೆಡುವ ಕಾರ್ಯಕ್ರಮಕ್ಕಾಗಿ 5 ಲಕ್ಷ, ನೈರ್ಮಲ್ಯ ವಿಭಾಗಕ್ಕೆ ಯಂತ್ರೋಪಕರಣಗಳ ಖರೀದಿಗಾಗಿ 25 ಲಕ್ಷ, ಶವ ಸಾಗಿಸುವ ವಾಹನ ಮತ್ತು ಜೆಸಿಬಿಯಂಥ ಭಾರಿ ವಾಹನಗಳ ಖರೀದಿಗಾಗಿ 40 ಲಕ್ಷ, ಕಚೇರಿಯ ಗಣಕ ಯಂತ್ರಗಳು ಇತರೆ ಉಪಕರಣಗಳ ಖರೀದಿಗಾಗಿ 13 ಲಕ್ಷ, ಕಚೇರಿ ಉಪಯೋಗಕ್ಕಾಗಿ ವಾಹನಗಳ ಬಾಡಿಗೆಗಾಗಿ 15 ಲಕ್ಷ, ಕಚೇರಿಗೆ ಸಿಸಿ ಕ್ಯಾಮರಾ ಅಳವಡಿಸಲು 5 ಲಕ್ಷ, ರೆಕಾರ್ಡ್ ರೂಂ ಗಣಕೀಕರಣಗೊಳಿಸಲು 15 ಲಕ್ಷ, ಕಚೇರಿಯ ನಿರ್ವಹಣಾ ವೆಚ್ಚಗಳಿಗಾಗಿ 20 ಲಕ್ಷ ವೆಚ್ಚ ಮಾಡಲು ಅನುಮೋದನೆ ನೀಡಲಾಯಿತು.
ನಗರಸಭಾ ಪೌರಾಯುಕ್ತ ಎಂ.ಜೆ. ಶಿವಸ್ವಾಮಿ, ಉಪಾಧ್ಯಕ್ಷೆ ಸೆಲ್ವಿಬಾಬು, ಸದಸ್ಯರು ಇದ್ದರು.