ಗುಂಡ್ಲುಪೇಟೆ: ಕಾರು ಪಲ್ಟಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕಣ್ಣೇಗಾಲ ಗೇಟ್ ಬಳಿ ಬುಧವಾರ ರಾತ್ರಿ ನಡೆದಿದೆ. ಸುನೀಶ್(32) ಮೃತ ವ್ಯಕ್ತಿ. ಕಾರಿನಲ್ಲಿದ್ದ ಅಭಿಲಾಷ್, ರಿಜೀಶ್ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇವರು ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದಾಗ ಕಣ್ಣೇಗಾಲದ ಸಮೀಪವಿರುವ ಕಾವೇರಿ ಕಂಫರ್ಟ್ ಬಳಿ ರಸ್ತೆಯ ತಿರುವಿನಲ್ಲಿ ಕಾರು ಪಲ್ಟಿ ಹೊಡೆದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.