ರಾವಂದೂರು: ತಿನ್ನುವ ದವಸ ಧಾನ್ಯಗಳಲ್ಲಿ, ಬಿಸ್ಕೆಟ್ಗಳಲ್ಲಿ, ಹಣ್ಣುಗಳಲ್ಲಿ, ತರಕಾರಿಗಳಲ್ಲಿ ಹುಳುಗಳು ಇರುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ, ಮದ್ಯಪಾನದಲ್ಲಿ ಹುಳುಗಳಿರುವುದನ್ನು ಕಂಡಿರಲಿಲ್ಲ. ತಾಲೂಕಿನ ರಾವಂದೂರಿನಲ್ಲಿ ಮಧು ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ವಿಂಡ್ಸರ್ ಕಂಪನಿಯ ವಿಸ್ಕಿ ಬಾಟಲಿಯಲ್ಲಿ ಹುಳುಗಳು ಪ್ರತ್ಯಕ್ಷವಾಗಿ ಆತಂಕಗೊಳಿಸಿದೆ. ಬಾಟಲಿಗಳಲ್ಲಿ ಹುಳುಗಳಿರುವುದನ್ನು ಗಮನಿಸಿದರೆ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಯಾವುದೆ ತಪಾಸಣೆ ಮಾಡದೆ ಕರ್ತವ್ಯ ಲೋಪ ಎಸಗಿರುವುದಕ್ಕೆ ಈ ಬಾಟಲಿಯಲ್ಲಿರುವ ಹುಳುಗಳೆ ಸಾಕ್ಷಿ.