ಚಾಮರಾಜನಗರ: ಸಮುದಾಯದ ಅಭಿವೃದ್ಧಿಗೆ ನಾಯಕತ್ವ ವಹಿಸುವ ಮೂಲಕ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಕೆಎಸ್ಐಸಿ ನೂತನ ಅಧ್ಯಕ್ಷ ನೂರೊಂದು ಶೆಟ್ಟಿ ಹೇಳಿದರು.
ತಾಲೂಕಿನ ಹರದನಹಳ್ಳಿ ಗ್ರಾಮದ ಬಂಡಿಗೆರೆಯಲ್ಲಿ ಉಪ್ಪಾರ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಉಪ್ಪಾರ ಸಮುದಾಯದವರು ಆರ್ಥಿಕವಾಗಿ ಹಿಂದುಳಿದಿದ್ದರೂ, ತಮ್ಮ ಸ್ವಾಭಿಮಾನವನ್ನು ಉಳಿಸಿಕೊಂಡು ಬಂದಿದ್ದಾರೆ. ಸಮುದಾಯವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜವನ್ನು ಅಭಿವೃದ್ಧಿಪಡಿಸಬೇಕು ಎಂದರು.
ಚಿಕ್ಕಸಿದ್ದಶೆಟ್ಟಿ, ಶಿವಯ್ಯ ಶೆಟ್ಟಿ, ಮಾದಶೆಟ್ಟಿ, ಗಡಿ ಯಜಮಾನರಾದ ಜಯಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ನೀಲಶೇಖರ್, ಕೃಷ್ಣಪ್ಪ, ಚಿಕ್ಕರಾಜು ಇದ್ದರು.