ಟ್ರ್ಯಾಕ್ಟರ್ನಿಂದ ಬಿದ್ದು ರೈತ ಸಾವು

Updated on: 

ಹನೂರು: ಜೋಳದ ಕಡ್ಡಿ ತುಂಬಿಕೊಂಡು ಟ್ರ್ಯಾಕ್ಟರ್ನಲ್ಲಿ ಬರುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಆಯ ತಪ್ಪಿ ಮೃತ ಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಚಿಂಚಳ್ಳಿ ಗ್ರಾಮ ನಿವಾಸಿ ಮೂರ್ತಿ(40) ಎಂಬವರು ಒಡೆಯರ ಪಾಳ್ಯದಿಂದ ಜೋಳದ ಕಡ್ಡಿ ತುಂಬಿಕೊಂಡು ಬರುತ್ತಿದ್ದ ವೇಳೆ ಟ್ರ್ಯಾಕ್ಟರ್ನಿಂದ ಆಯ ತಪ್ಪಿ ಬಿದ್ದು ಉದ್ದನೂರು ಬಳಿ ಮೃತಪಟ್ಟಿದ್ದಾರೆ. ಹನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೂಜು: ಬಂಧನ
ಚಾಮರಾಜನಗರ: ತಾಲೂಕಿನ ಮಾದಾಪುರ ಬಳಿ ಬಾಳೆತೋಟದಲ್ಲಿ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ರಾಮಸಮುದ್ರ ಪೊಲೀಸರು ದಾಳಿ ನಡೆಸಿ ನಿಂಗರಾಜು, ಕೆಂಪಣ್ಣ, ವೆಂಕಟರಾಮಶೆಟ್ಟಿ ಮತ್ತು ಮಹೇಶ್ ಎಂಬವರನ್ನು ಬಂಧಿಸಿ, 10,400 ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.
ಗುರುತಿನ ಚೀಟಿ ವಿತರಣೆ
ಗುಂಡ್ಲುಪೇಟೆ: ಮತದಾರರು ಹೊಸ ಗುರುತಿನ ಚೀಟಿ ಪಡೆಯುವ ಮೂಲಕ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ತಹಸೀಲ್ದಾರ್ ಕವಿತಾ ರಾಜರಾಂ ಮನವಿ ಮಾಡಿದರು. ಪಟ್ಟಣದ ಗುರುಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ 18 ವರ್ಷ ತುಂಬಿದ ಯುವಕರಿಗೆ ಮತದಾರರ ಗುರುತಿನ ಚೀಟಿ ವಿತರಿಸಿ ಮಾತನಾಡಿದರು. ಈ ಸಾಲಿನಲ್ಲಿ ಮತದಾರರಾಗಲು ಅರ್ಜಿ ಸಲ್ಲಿಸಿರುವವರು ಮತದಾರರ ಹೊಸ ಚೀಟಿ ಪಡೆಯಬಹುದು. ಆಕಸ್ಮಾತ್ ಗುರುತಿನ ಚೀಟಿ ಕಳೆದುಕೊಂಡವರು ಸಹ 25 ಪಾವತಿಸಿ ಹೊಸ ಗುರುತಿನ ಪತ್ರ ಪಡೆಯಬಹುದು ಎಂದರು. ಪಟ್ಟಣ ವಿವಿಧ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com