ಬೇಗೂರು: ಬೇಸಿಗೆ ಕಾಲವಾದ್ದರಿಂದ ರಾಸುಗಳಿಗೆ ಅನೇಕ ಮಾರಣಾಂತಿಕ ಕಾಯಿಲೆಗಳು ಹರಡುವ ಭೀತಿಯಿದ್ದು ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ರೈತರು ಮುಂದಾಗಬೇಕು ಎಂದು ಪಶು ವೈದ್ಯ ಡಾ. ಕೃಷ್ಣ ಹೇಳಿದರು. ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಹೈನುಗಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಂಚಾಕ್ಷರಿ ಕಾರ್ಯಕ್ರಮ ಉದ್ಘಾಟಿಸಿದರು. ಬಿ.ಎಸ್.ಶಿವಣ್ಣ, ಪುಟ್ಟರಾಜು, ಮಹದೇವಯ್ಯ, ನಿಂಗಪ್ಪ, ಸೀತಾರಾಂ, ಮಹೇಶ್, ಇದ್ದರು.