ನೀತಿಸಂಹಿತೆ ಉಲ್ಲಂಘನೆ ಪರಿಶೀಲನೆಗೆ ಕಣ್ಗಾವಲು ತಂಡ

Updated on: 

ಕ.ಪ್ರ.ವಾರ್ತೆ ್ಣ ಚಾ.ನಗರ ್ಣ ಮಾ.29
ವಿಧಾನಸಭೆ ಚುನಾವಣೆ ವೇಳೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸುವ ಸಭೆ, ಸಮಾರಂಭ ಹಾಗೂ ಪ್ರಚಾರಕ್ಕಾಗಿ ಉಪಯೋಗಿಸಲಾದ ವ್ಯವಸ್ಥೆ ಸಾಮಗ್ರಿಗಳ ಬಳಕೆಯಿಂದ ನೀತಿಸಂಹಿತೆ ಉಲ್ಲಂಘನೆಯಾಗಿದೆಯೇ ಎಂಬ ಪರಿಶೀಲನೆಗಾಗಿ ವೀಡಿಯೋ ಚಿತ್ರೀಕರಣ ನಡೆಸಲು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಕಣ್ಗಾವಲು ತಂಡಗಳನ್ನು ನೇಮಕ ಮಾಡಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಮೆರವಣಿಗೆ, ಸಮಾರಂಭ, ಸಭಾ ವೇದಿಕೆ, ಸಭಿಕರ ಕುರ್ಚಿಗಳು, ಸಭೆಯ ಆವರಣದಲ್ಲಿ ಹಾಕಲಾಗಿರುವ ಫ್ಲೆಕ್ಸ್, ಬ್ಯಾನರ್ ಇತರೆ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಕಣ್ಗಾವಲು ತಂಡ ಸಂಪೂರ್ಣ ಚಿತ್ರೀಕರಣ ಮಾಡಲಿದೆ.
ರಾಜಕೀಯ ಪಕ್ಷಗಳ ನಾಯಕರು ಆಯೋಜಿಸುವ ಮತ್ತು ಭಾಗವಹಿಸುವ ಎಲ್ಲ ಸಭೆ, ಸಮಾರಂಭ, ಬಳಸುವ ವಾಹನಗಳನ್ನು ಸಹ ದಾಖಲು ಮಾಡಲಾಗುತ್ತದೆ. ಇದಕ್ಕಾಗಿ ನೇಮಕ ಮಾಡಲಾಗಿರುವ ತಂಡದ ಅಧಿಕಾರಿಗಳ ವಿವರ ಹೀಗಿದೆ.
ಹನೂರು ಕ್ಷೇತ್ರ: ಪಾಳ್ಯ ಹೋಬಳಿಯ ತಂಡದ ಮೇಲ್ವಿಚಾರಕರಾಗಿ ಸಹಾಯಕ ಆಡಳಿತ ಕೃಷಿ ಅಧಿಕಾರಿ ಚಂದ್ರಶೇಖರ್, ಸದಸ್ಯರಾಗಿ ದ್ವಿತೀಯ ದರ್ಜೆ ಸಹಾಯಕ ಬಸವಣ್ಣ ಕೆಲಸ ನಿರ್ವಹಿಸಲಿದ್ದಾರೆ. ಹನೂರು ಪಪಂ ವ್ಯಾಪ್ತಿಗೆ ರಾಜಸ್ವ ನಿರೀಕ್ಷಕರಾದ ಶಿವಣ್ಣ ತಂಡದ ಮೇಲ್ವಿಚಾರಕರಾಗಿದ್ದು, ಸದಸ್ಯರಾಗಿ ಪ್ರಥಮ ದರ್ಜೆ ಸಹಾಯಕರಾದ ರಮೇಶ್ ನೇಮಕವಾಗಿದ್ದಾರೆ.
ರಾಮಾಪುರ ಹೋಬಳಿಗೆ ಪ್ರಥಮ ದರ್ಜೆ ಸಹಾಯಕ ಗಿರೀಶ್ ಮೇಲ್ವಿಚಾರಕರಾಗಿದ್ದು, ಪ್ರಥಮ ದರ್ಜೆ ಸಹಾಯಕ ಹನುಮಂತಪ್ಪ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಲೊಕ್ಕನಹಳ್ಳಿ ವ್ಯಾಪ್ತಿಯ ತಂಡಕ್ಕೆ ಸಹಾಯಕ ಕೃಷಿ ಆಡಳಿತಾಧಿಕಾರಿ ಮುತ್ತುಸ್ವಾಮಿ ಮೇಲ್ವಿಚಾರಕರಾಗಿದ್ದು, ಸಹಾಯಕ ಆಡಳಿತ ಕೃಷಿ ಅಧಿಕಾರಿ ರಮೇಶ್‌ಬಾಬು ಸದಸ್ಯರಾಗಿ ನಿಯೋಜಿತಗೊಂಡಿದ್ದಾರೆ.
ಕೊಳ್ಳೇಗಾಲ ಕ್ಷೇತ್ರ: ಸಂತೆಮರಹಳ್ಳಿ ಹೋಬಳಿ ವ್ಯಾಪ್ತಿಗೆ ಕೃಷಿ ಸಹಾಯಕರಾದ ನಾಗಾನಾಯಕ್ ಮೇಲ್ವಿಚಾರಕರಾಗಿದ್ದು ರೇಷ್ಮೆ ನಿರೀಕ್ಷಕ ಕೆ.ಬಸವರಾಜು ಸದಸ್ಯರಾಗಿ ನಿಯೋಜನೆಗೊಂಡಿದ್ದಾರೆ.
ಕೊಳ್ಳೇಗಾಲ ಕಸಬಾ ಹೋಬಳಿಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜು ಮೇಲ್ವಿಚಾರಕರಾಗಿದ್ದು, ದ್ವಿತೀಯ ದರ್ಜೆ ಸಹಾಯಕ ಜಯಂತ್ ಸದಸ್ಯರಾಗಿ ಕಾರ್ಯ ನಿರ್ವಹಿಸುವರು.
ಅಗರ ಹೋಬಳಿಗೆ ಸಹಾಯಕ ಕೃಷಿ ಅಧಿಕಾರಿ ಶಿವಪ್ರಸಾದ್ ಮೇಲ್ವಿಚಾರಕರಾಗಿದ್ದು ದ್ವಿತೀಯ ದರ್ಜೆ ಸಹಾಯಕ ನಾಗೇಶ್ ಸದಸ್ಯರಾಗಿ ಕಾರ್ಯ ನಿರ್ವಹಿಸುವರು. ಯಳಂದೂರು ಕಸಬಾ ಹೋಬಳಿಗೆ ಶಿಕ್ಷಣ ಸಂಯೋಜಕರಾದ ವೀರಭದ್ರಸ್ವಾಮಿ ತಂಡದ ಮೇಲ್ವಿಚಾರಕರಾಗಿದ್ದು, ಕೃಷಿ ಇಲಾಖೆಯ ಜಯಣ್ಣ ಸದಸ್ಯರಾಗಿ ಕೆಲಸ ನಿರ್ವಹಿಸುವರು.
ಚಾಮರಾಜನಗರ ಕ್ಷೇತ್ರ: ಕಸಬಾ ಹೋಬಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ಎಂ. ಮಹೇಶ್‌ಚಂದ್ರ ತಂಡದ ಮೇಲ್ವಿಚಾರಕರಾಗಿದ್ದು, ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಸದಸ್ಯರಾಗಿ ನೇಮಕವಾಗಿದ್ದಾರೆ. ಚಂದಕವಾಡಿ ಹೋಬಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀಕ್ಷಕ ಶಿವಸ್ವಾಮಿ ತಂಡದ ಮೇಲ್ವಿಚಾರಣೆ ವಹಿಸಲಿದ್ದು, ಪ್ರಥಮ ದರ್ಜೆ ಸಹಾಯಕ ದಾಮೋದರ್ ಸದಸ್ಯರಾಗಿ ಕೆಲಸ ನಿರ್ವಹಿಸುವರು.
ಹರದನಹಳ್ಳಿ ಹೋಬಳಿಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿಯ ರಾಮಸ್ವಾಮಿ ತಂಡದ ಮೇಲ್ವಿಚಾರಣೆ ಮಾಡಲಿದ್ದು, ಪ್ರಥಮ ದರ್ಜೆ ಸಹಾಯಕ ನಾಗರಾಜಪ್ಪ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಹರವೆ ಹೋಬಳಿಗೆ ಜಂಟಿ ಕೃಷಿ  ನಿರ್ದೇಶಕರ ಕಚೇರಿಯ ಅಧೀಕ್ಷಕರಾದ ಲಿಂಗಯ್ಯ ಮೇಲ್ವಿಚಾರಣೆ ವಹಿಸಲಿದ್ದಾರೆ. ಪ್ರಥಮ ದರ್ಜೆ ಸಹಾಯಕ ಎಂ. ಸೋಮಶೇಖರ್ ಸದಸ್ಯರಾಗಿ ನೇಮಕವಾಗಿದ್ದಾರೆ.
ಗುಂಡ್ಲುಪೇಟೆ ಕ್ಷೇತ್ರ: ಬೇಗೂರು ಹೋಬಳಿ ವ್ಯಾಪ್ತಿಗೆ ಗ್ರಾಪಂ ಕಾರ್ಯದರ್ಶಿ ಎಂ.ವಿ.ಶಿವಸ್ವಾಮಿ ಮೇಲ್ವಿಚಾರಕರಾಗಿದ್ದು ದ್ವಿತೀಯ ದರ್ಜೆ ಸಹಾಯಕ ಎಂ.ದೊಡ್ಡಮಲ್ಲಪ್ಪ ಸದಸ್ಯರಾಗಿದ್ದಾರೆ.
ಕಸಬಾ ಹೋಬಳಿಗೆ ಗ್ರಾಪಂ ಕಾರ್ಯದರ್ಶಿ ಹಾಲಪ್ಪ ತಂಡದ ಮೇಲ್ವಿಚಾರಕರಾಗಿದ್ದು, ದ್ವಿತೀಯ ದರ್ದೆ ಸಹಾಯಕ ಬಿ.ಕೆ.ಕೃಷ್ಣಾಚಾರಿ ಸದಸ್ಯರಾಗಿದ್ದಾರೆ.
ತೆರಕಣಾಂಬಿ ಹೋಬಳಿ ವ್ಯಾಪ್ತಿಗೆ ಗ್ರಾಪಂ ಕಾರ್ಯದರ್ಶಿ ಬಿ.ಎಂ.ಮಹದೇವಯ್ಯ ತಂಡದ ಮೇಲ್ವಿಚಾರಣೆ ಮಾಡಲಿದ್ದು, ದ್ವಿತೀಯ ದರ್ಜೆ ಸಹಾಯಕ ಹೇಮರಾಜು ಸದಸ್ಯರಾಗಿ ಕಾರ್ಯ ನಿರ್ವಹಿಸುವರು.
ಹಂಗಳ ಹೋಬಳಿ ವ್ಯಾಪ್ತಿಗೆ ಗ್ರಾಪಂ ಕಾರ್ಯದರ್ಶಿ ಆರ್.ಬಸವಣ್ಣ ತಂಡದ ಮೇಲ್ವಿಚಾರಕರಾಗಿದ್ದು, ದ್ವಿತೀಯ ದರ್ಜೆ ಸಹಾಯಕ ಡಿ.ಕೆ. ಗೋವಿಂದರಾಜು ಸದಸ್ಯರಾಗಿ ಕಾರ್ಯ ನಿರ್ವಹಿಸುವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com