ಕ.ಪ್ರ.ವಾರ್ತೆ ್ಣ ಚಾ.ನಗರ ್ಣ ಮಾ.30
ಗ್ರಾಮದಲ್ಲಿ ಮಳೆ ಬಂದು ಸಮೃದ್ಧಿ ಬರಲಿ ಎಂದು ಪ್ರಾರ್ಥಿಸಿ ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ಗೊರೆ ಹಬ್ಬವನ್ನು ಆಚರಿಸಲಾಯಿತು.
ಗ್ರಾಮದ ಚಕ್ರ ಕುಟುಂಬಕ್ಕೆ ಸೇರಿದ ಕೆಲವು ಮಂದಿ ವಿವಿಧ ವೇಷಭೂಷಣ ತೊಟ್ಟು, ಬಿದಿರಿನ ತಟ್ಟೆ ಹಿಡಿದುಕೊಂಡು, ಕಪ್ಪು ಬಣ್ಣ ಹಚ್ಚಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸಿಕೊಂಡು ಮೆರವಣಿಗೆ ನಡೆಸಿದರು.
ಗ್ರಾಮದ ವಿವಿಧ ಸಮುದಾಯ ಮಹಿಳೆಯರು ಇಬ್ಬರು ಚಕ್ರರಿಗೆ ಮೊದಲು ಸಗಣಿ ನೀರು ಹಾಕಿ, ಬಳಿಕ ನೀರು ಹಾಕಿ, ತಮ್ಮ ಮನೆಯಲ್ಲಿರುವ ದವಸ ಧಾನ್ಯಗಳನ್ನು ನೀಡಿದರು. ಗ್ರಾಮದ ಎಲ್ಲ ಮನೆಗಳಿಗೂ ಹೋಗಿ ದವಸ ಧಾನ್ಯಗಳನ್ನು ಸಂಗ್ರಹಿಸಿ, ಗ್ರಾಮ ದೇವತೆ ಮಾರಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಕಾಲದಲ್ಲಿ ಮಳೆಯಾಗಿ, ಬೆಳೆ ಸಮೃದ್ಧಿಯಾಗಿ ಬರಲಿ ಎಂದು ಪ್ರಾರ್ಥಿಸುವುದು ಹಬ್ಬದ ವಾಡಿಕೆ.