ಚಾಮರಾಜನಗರ: ಸರ್ಕಾರದಿಂದ ನಗರಸಭೆಗೆ ನಾಮ ನಿರ್ದೇಶನಗೊಂಡಿರುವ ಐವರು ನಗರಸಭಾ ಸದಸ್ಯರು ಪಟ್ಟಣದ ಅಭಿವೃದ್ದಿಗೆ ಶ್ರಮಿಸುವ ಜೊತೆಗೆ ಪಕ್ಷ ಸಂಘಟನೆ ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಎ. ಜಯಸಿಂಹ ಸಲಹೆ ನೀಡಿದರು.
ನಗರದ ಸಿಂಹ ಮೂವೀಸ್ ಪ್ಯಾರಾಡೈಸ್ನಲ್ಲಿ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮನ್ನು ಗುರುತಿಸಿ ಪಕ್ಷ ಹಾಗೂ ಸರ್ಕಾರ ನಾಮ ನಿರ್ದೇಶನ ಮಾಡಿ ಹೆಚ್ಚಿನ ಜವಾಬ್ದಾರಿ ನೀಡಿದೆ. ಇದಕ್ಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸುವ ಜೊತೆಗೆ ಕಾಂಗ್ರೆಸ್ ಕಚೇರಿಗೆ ಆಗಮಿಸಿ ನಾಗರಿಕರ ಸಮಸ್ಯೆ ಆಲಿಸಬೇಕು ಎಂದರು.
ಇದೇ ವೇಳೆ ನಾಮನಿರ್ದೇಶನಗೊಂಡ ಸೈಯನ್ ಡಿ ಸಿಲ್ವ, ಶಾಂತಲಾ, ಸಿ.ಕೆ. ಮಂಜುನಾಥ್, ಕುಮಾರಸ್ವಾಮಿ, ಸೋಯಲ್ ಅಹಮದ್ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಸದಾಶಿವಮೂರ್ತಿ, ಬ್ಲಾಕ್ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಸೈಯದ್ರಫಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರತ್ನಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ಪದ್ಮಾ ಪುರುಷೋತ್ತಮ್, ಆಶಾ, ಪ್ರಸಾದ್ ಇತರರು ಇದ್ದರು.
Advertisement